ಬಸ್ – ಟಿಪ್ಪರ್ ‌ಅಪಘಾತ: ಹೊತ್ತಿಕೊಂಡ ಬೆಂಕಿಯಲ್ಲಿ ಹತ್ತು ಮಂದಿ ಸಜೀವ ದಹನ

ಹೈದರಾಬಾದ್: ಬಸ್‌ ಮತ್ತು ಟಿಪ್ಪರ್ ಢಿಕ್ಕಿ ಹೊಡೆದು ಎರಡೂ ವಾಹನಗಳಲ್ಲಿ ಬೆಂಕಿ ಹತ್ತಿಕೊಂಡ ಪರಿಣಾಮ ಸುಮಾರು 10 ಮಂದಿ ಸಜೀವ ದಹನವಾದ ಘಟನೆ ಮಾರ್ಕಪುರಂ ಬಳಿಯ ರಾಯವರಂ ಎಂಬಲ್ಲಿ ನಡೆದಿದೆ.

ಹರಿಕೃಷ್ಣ ಟ್ರಾವೆಲ್ಸ್‌ಗೆ ‌ಸೇರಿದ ಬಸ್ಸು ಮತ್ತು ಟಿಪ್ಪರ್ ನಡುವೆ ಅಪಘಾತ ನಡೆದಿದೆ. ಈ ದುರಂತದಲ್ಲಿ ಎರಡೂ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಬಸ್ಸು ಸಂಪೂರ್ಣವಾಗಿ ಬೆಂಕಿಗೆ ಸುಟ್ಟು ಹೋಗಿದೆ. ಘಟನೆಯಲ್ಲಿ 10 ಮಂದಿ ಸಜೀವವಾಗಿ ಸುಟ್ಟು ಹೋಗಿದ್ದಾಗಿ ತಿಳಿದು ಬಂದಿದೆ.

ಬೆಳಗ್ಗೆ ಸುಮಾರು 6 ರಿಂದ 6.30 ರ ನಡುವೆ ಈ ಘಟನೆ ನಡೆದಿದೆ. ಬಸ್ಸು ತೆೆಲಂಗಾಣದ ಜಗಿತಿಯಾಲ್‌ನಿಂದ ಆಂಧ್ರದ ವಿಂಜಾಮುರಿಗೆ ಪ್ರಯಾಣಿಸುತ್ತಿತ್ತು. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಬಸ್ಸು ಮತ್ತು ಟಿಪ್ಪರ್‌ಗಳೆರಡೂ ಸಂಪೂರ್ಣ ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.























































 
 

error: Content is protected !!
Scroll to Top