ಕಾರುಗಳ ಮುಖಾಮುಖಿ ಡಿಕ್ಕಿ : ಪಾದಚಾರಿಗೆ ಗಂಭೀರ ಗಾಯ

ಬೆಳ್ಳಾರೆಯಲ್ಲಿ ಕಾರುಗಳ ನಡುವೆ ಅಪಘಾತ ನಡೆದಿದ್ದು, ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದವರಿಗೆ ಕಾರು ಗುದ್ದಿ ಗಂಭೀರ ಗಾಯವಾದ ಘಟನೆ ಬುಧವಾರ ಸಂಜೆ ನಡೆದಿದೆ.

ಮಾರುತಿ 800 ಕಾರು ಮತ್ತು ಬ್ರಿಜಾ ಕಾರುಗಳ ನಡುವೆ ಡಿಕ್ಕಿಯಾಗಿದ್ದು, ಡಿಕ್ಕಿ ಹೊಡೆದ ಪರಿಣಾಮ ಹತ್ತಿರದಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಕಾರು ಗುದ್ದಿದೆ. ಕಾರು ಗುದ್ದಿದ ಪರಿಣಾಮ ಪೆರುವಾಜೆಯ ವ್ಯಕ್ತಿಗೆ ಗಂಭೀರ ಗಾಯವಾಗಿದೆ.

ಗಾಯಗೊಂಡವರನ್ನು ಸುಳ್ಯದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ.
ಬೆಳ್ಳಾರೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.























































 
 
error: Content is protected !!
Scroll to Top