ಗದಗ: ಬಡತನದ ಕಾರಣಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆ ಇದ್ದರೂ ಹೋಗದೆ ದ್ರಾಕ್ಷಿ ತೋಟದಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದ ವಿದ್ಯಾರ್ಥಿನಿಯನ್ನು ಕರೆತಂದು ಅಧಿಕಾರಿಗಳು ಪರೀಕ್ಷೆ ಬರೆಸಿದ ಘಟನೆ ಮುಂಡರಗಿಯ ಬರ್ಡೂರಿನಲ್ಲಿ ನಡೆದಿದೆ.
ಪಲ್ಲವಿ ಎಂಬ ಬಾಲಕಿ ಈ ಬಾರಿ ಹತ್ತನೇ ತರಗತಿ ಪರೀಕ್ಷೆ ಬರೆಯಬೇಕಾಗಿತ್ತು. ಆದರೆ ಮನೆಯಲ್ಲಿ ತೀರದ ಬಡತನದ ಕಾರಣಕ್ಕೆ ಆಕೆ ತನ್ನ ಪರೀಕ್ಷೆಗೂ ಹೋಗದೆ ದ್ರಾಕ್ಷಿ ತೋಟಕ್ಕೆ ದಿನಗೂಲಿ ಕೆಲಸಕ್ಕೆ ಹೋಗಿದ್ದಳು. ಅವಳ ಪರಿಸ್ಥಿತಿ ಅರಿತ ಅಧಿಕಾರಿಗಳು ಆಕೆ ಕೆಲಸ ಮಾಡುತ್ತಿದ್ದಲ್ಲಿಗೆ ತೆರಳಿ, ಆಕೆಯ ಪೋಷಕರ ಮನವೊಲಿಸಿ ಪರೀಕ್ಷೆ ಬರೆಯುವಂತೆ ಮಾಡಿದ್ದಾರೆ.
ಈಗಾಗಲೇ ವಿಜ್ಞಾನ ಪರೀಕ್ಷೆಗೆ ಪಲ್ಲವಿ ಗೈರುಹಾಜರಾಗಿದ್ದಳು. ಇದರ ಕಾರಣ ಕೆದಕಿದ ಅಧಿಕಾರಿಗಳಿಗೆ ಅವಳು ಯಾತಕ್ಕಾಗಿ ಪರೀಕ್ಷೆ ಬರೆದಿಲ್ಲ ಎನ್ನುವುದರ ಕಾರಣ ಗೊತ್ತಾಗಿತ್ತು. ಆಕೆಯ ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳು ಆಕೆ ಕೆಲಸ ಮಾಡುತ್ತಿದ್ದಲ್ಲಿಗೆ ತೆರಳಿ ಆಕೆ ಪರೀಕ್ಷೆ ಬರೆಯುವ ಅನುಕೂಲ ಕಲ್ಪಿಸಿದ್ದಾರೆ.
ಅವಳಿಗೆ ಪರೀಕ್ಷೆ ಬರೆಯಲು ಸಹಾಯ ಮಾಡಿದ ಅಧಿಕಾರಿಗಳಿಗೂ ಆಕೆ ಧನ್ಯವಾದ ತಿಳಿಸಿದ್ದಾಳೆ.

























