ಮಂಡ್ಯ: ಈಜಲೆಂದು ಹೋದ ಬಾಲಕ ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮಳವಳ್ಳಿಯ ನಂದೀಪುರದಲ್ಲಿ ನಡೆದಿದೆ.
ಕೊಡೀಹಳ್ಳಿ ನಿವಾಸಿ ಪೃಥ್ವಿನ್ (15) ಮೃತ ಬಾಲಕ.
ಈತ ದಳವಾಯಿ ಕೊಡೀಹಳ್ಳಿ ಸರ್ಕಾರಿ ಪ್ರೌಢ ಶಾಲೆಯ 8 ತರಗತಿ ವಿದ್ಯಾರ್ಥಿ. ಶಾಲೆಗೆ ರಜೆ ಇದ್ದುದರಿಂದ ತನ್ನ ನಾಲ್ವರು ಗೆಳೆಯರ ಜೊತೆಗೆ ಭಾನುವಾರ ಈಜಾಟಕ್ಕೆ ತೆರಳಿದ್ದ. ಆದರೆ ಸಂಜೆಯ ವರೆಗೂ ಬಾಲಕ ಮನೆಗೆ ಬಾರದೇ ಇದ್ದಾಗ ಗಾಬರಿಗೊಂಡ ಮನೆಯವರು ಶೋಧ ನಡೆಸಿದ್ದರು.
ಬಾಲಕನ ಮೃತದೇಹ ನಂದೀಪುರದ ರಾಜೇಗೌಡ ಎಂಬವರ ಜಮೀನಿನ ಕೃಷಿ ಹೊಂಡದಲ್ಲಿ ಪತ್ತೆಯಾಗಿದೆ. ಹಲಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

























