ನಿಷೇಧಿತ ಡ್ರಗ್ಸ್ ಮಾರಾಟ: ಆರೋಪಿಗಳ ಬಂಧನ

ಮಂಗಳೂರು: ಅಟೋರಿಕ್ಷಾದಲ್ಲಿ ನಿಷೇಧಿತ ಡ್ರಗ್ಸ್ ಎಂಡಿಎಂಎ ಅನ್ನು ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರಿಗೆ ಮಾರಾಟ ಮಾಡಲು ಪ್ರಯತ್ನ ನಡೆಸುತ್ತಿದ್ದ ಮೂವರು ಪೆಡ್ಲರ್‌ಗಳನ್ನು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಹೈದರ್ ಯಾನೆ ಹೈದರ್ ಆಲಿ, ಚೆಂಬುಗುಡ್ಡೆ ನಿವಾಸಿ ಮೊಹಮ್ಮದ್ ಆಜಾದ್ ಮತ್ತು ಜೈಸನ್ ‌ಮಿನೇಜಸ್ ಎಂದು ಗುರುತಿಸಲಾಗಿದೆ.

ಆರೋಪಿಗಳು ಪಂಪ್ವೆಲ್ ಮತ್ತು ಎಕ್ಕೂರು ಪ್ರದೇಶಗಳಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಅದರಂತೆ ಕಾರ್ಯಾಚರಣೆ ನಡೆಸಿ ಆರೋಪಿಗಳು ಮತ್ತು ಅಟೋ‌ರಿಕ್ಷಾವನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿದೆ. ಆರೋಪಿಗಳಿಂದ ಒಟ್ಟು 4,37,500 ರೂ. ಗಳ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.























































 
 

error: Content is protected !!
Scroll to Top