ಕಾವು: ರಾಷ್ಟ್ರಸೇವೆಯ ಪವಿತ್ರ ಪಥದಲ್ಲಿ ತನ್ನ ಬದುಕಿನ ಬಹುಪಾಲನ್ನು ನಿಶ್ಶಬ್ದವಾಗಿ ಸಮರ್ಪಿಸಿಕೊಂಡ ಹಿರಿಯ ಶಾಖಾ ಪ್ರಮುಖ ಗಣಪಯ್ಯ ಕಾವು ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಗೌರವಾರ್ಪಣೆ ಸಲ್ಲಿಸಲಾಯಿತು.

ಗಣಪಯ್ಯರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಶಾಲು ಹೊದಿಸಿ, ಹಾರ ಹಾಕಿ, ಗೌರವಧನ ಹಾಗೂ ಫಲವಸ್ತುಗಳನ್ನು ನೀಡಿ ಅವರನ್ನು ಸನ್ಮಾನಿಸ, ಮಾತನಾಡಿದ ಅವರು, ನಿತ್ಯ ಶಾಖೆಯ ಮೂಲಕ ರಾಷ್ಟ್ರಚಿಂತನೆಯನ್ನು ತಲೆಮಾರುಗಳಿಗೆ ಪಸರಿಸಿದ ಗಣಪಯ್ಯರಂತಹ ತ್ಯಾಗಮೂರ್ತಿಗಳು ಸಂಘದ ನಿಜವಾದ ಶಕ್ತಿಯಾಗಿದ್ದಾರೆ. ಅವರ ಸೇವಾಭಾವ ಮತ್ತು ನಿಷ್ಠೆ ನಮಗೆಲ್ಲಾ ಮಾದರಿ ಎಂದು ಹೇಳಿದರು.
ಹಿರಿಯರಾದ ಮಹಾಲಿಂಗೇಶ್ವರ ಭಟ್ ಪಳನೀರು ಅವರು ಮಾತನಾಡಿ, ಅಚ್ಚುಕಟ್ಟಾದ ಶಾಖಾ ಕಾರ್ಯಪದ್ಧತಿ ಹಾಗೂ ಭಗವಾಧ್ವಜದ ಮೇಲಿನ ಅಪಾರ ಭಕ್ತಿಯಿಂದ ಗಣಪಯ್ಯರು ಶಾಖೆಗೆ ಜೀವ ತುಂಬಿದವರು. ಅವರ ಮೌನ ಸೇವೆ ಅನೇಕ ಕಾರ್ಯಕರ್ತರ ಮನಸ್ಸಿನಲ್ಲಿ ಶಾಶ್ವತ ಪ್ರೇರಣೆಯಾಗಿ ಉಳಿಯಲಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಅನಂತಕೃಷ್ಣ ನಾಯಕ್, ರವಿಪ್ರಸಾದ್ ರೈ ಕಾವು, ನಿರಂಜನ್ ಕಾವು, ಸುನಿಲ್ ನಿಧಿಮುಂಡ, ಸುದೀಂದ್ರ ಕಾವು, ಅಮೃತಲಿಂಗಂ ಕಾವು, ಪುನೀತ್ ಕೆರೆಮಾರ್, ಕೇಶವ ಸಸ್ಪೆಟ್ಟಿ, ಸಂಕಪ್ಪ ಪೂಜಾರಿ ಚಾಕೋಟೆ, ಚಿದಾನಂದ ಆಚಾರ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪುತ್ತಿಲ ಪರಿವಾರ ಕಾವು ಘಟಕದ ವತಿಯಿಂದ ಆಯೋಜಿಸಲಾದ ಈ ಗೌರವಾರ್ಪಣಾ ಕಾರ್ಯಕ್ರಮವನ್ನು ಸುನಿಲ್ ಬೋರ್ಕರ್ ನಿರ್ವಹಿಸಿದರು. ಘಟಕದ ಅಧ್ಯಕ್ಷ ಹರೀಶ್ ಕುಂಜತ್ತಾಯ ವಂದಿಸಿದರು.



























