ಜೀವ ಭಯ: ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆಗೆ ಕಳುಹಿಸಿಕೊಟ್ಟ ಪತಿ

ಲಕ್ನೋ: ಪ್ರಾಣ ಭಯಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆಗೆ ಕಳುಹಿಸಿದ ಘಟನೆ ಉತ್ತರ ಪ್ರದೇಶದ ಬುಲಂಧ್‌ಶಹರ್‍‌ನಲ್ಲಿ ನಡೆದಿದೆ.

ಕೂಲಿ ಕಾರ್ಮಿಕ ರಾಜ್‌ಕುಮಾರ್ ಎಂಬವರದ್ದು ಏಳು ವರ್ಷದ ದಾಂಪತ್ಯ. ಆರು ತಿಂಗಳ ಸಣ್ಣ ಮಗುವೂ ಅವರಿಗಿದೆ. ಈ ನಡುವೆ ಅವರ ಪತ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯ ಜೊತೆಗೆ ಸಂಬಂಧ ಶುರುವಾಗಿದೆ.

ಪತಿ ಆಕೆಯ ಮೊಬೈಲ್ ಪರಿಶೀಲನೆ ನಡೆಸಿದಾಗ ಪತ್ನಿ ಮತ್ತು ಆಕೆಯ ಪ್ರೇಮಿಯ ಆಕ್ಷೇಪಾರ್ಹ ಚಿತ್ರಗಳೂ ಕಂಡುಬಂದಿವೆ. ಜೊತೆಗೆ ಸಿಮೆಂಟ್, ನೀಲಿ ಡ್ರಮ್ ಎನ್ನುವ ಸಂದೇಶಗಳೂ ಕಂಡು ಬಂದಿವೆ. ಇದು ಪತಿ ರಾಜ್‌ಕುಮಾರ್ ಅವರಿಗೆ ಆತಂಕ ಉಂಟು ಮಾಡಿದೆ. ಜೊತೆಗೆ ಕೆಲ ಸಮಯದ ಹಿಂದೆ ಮೀರತ್‌ನಲ್ಲಿ ನಡೆದಿದ್ದ ಕೊಲೆಯೊಂದರ ಮಾದರಿಯನ್ನು ಉಲ್ಲೇಖಿಸಿ ಪತ್ನಿ ತನ್ನ ಪತಿ ರಾಜ್‌ಕುಮಾರ್‌ಗೂ ಅದೇ ರೀತಿ ಕೊಲ್ಲುವುದಾಗಿ ಬೆದರಿಕೆ ಸಹ ಹಾಕಿದ್ದಳು ಎಂದು ತಿಳಿದು ಬಂದಿದೆ.



























































 
 

ಭಯದಿಂದ ರಾಜ್‌ಕುಮಾರ್ ಪೊಲೀಸ್ ಮೊರೆ ಹೋಗಿದ್ದಾರೆ. ಈ ಸಂಬಂಧ ಮಹಿಳಾ ಮಧ್ಯಸ್ಥಿಕೆ ಕೇಂದ್ರದಲ್ಲಿ ಕೌನ್ಸಲಿಂಗ್ ಸಹ ನಡೆದಿದೆ. ಈ ವೇಳೆ ಪತಿ ಪತ್ನಿಯನ್ನು ಪ್ರಿಯಕರನ ಜೊತೆಗೆ ಕಳುಹಿಸಿಕೊಟ್ಟಿದ್ದಾರೆ. ಆಕೆಯೂ ತಾನು ಪ್ರಿಯಕರನ ಜೊತೆಗೆಯೇ ಇರುವುದಾಗಿ ಹೇಳಿದ್ದು, ತನ್ನ ಸುರಕ್ಷತಾ ದೃಷ್ಟಿಯಿಂದ ಪತ್ನಿಯನ್ನು ಆಕೆಯ ಪ್ರೇಮಿಯ ಜೊತೆ ಕಳುಹಿಸಿದ್ದಾರೆ ರಾಜ್ಕುಮಾರ್.

error: Content is protected !!
Scroll to Top