ದಾಂಪತ್ಯ ಕಲಹ: ಪತ್ನಿಯನ್ನು ಕೊಲೆಗೈದು ‌ಪತಿ ಆತ್ಮಹತ್ಯೆಗೆ ಯತ್ನ

ಪುತ್ತೂರು: ಗಂಡ ಹೆಂಡಿರ ನಡುವಿನ ಜಗಳ ಕೊನೆಗೆ ದುರಂತ ಅಂತ್ಯ ಕಂಡ ಘಟನೆ ಅರಿಯಡ್ಕ ಗ್ರಾಮದ ಕಟ್ಟಾತ್ತಾರಿನ ಗೋಳ್ತಿಲ‌ದಲ್ಲಿ ನಡೆದಿದೆ.

ದಂಪತಿ ನಡುವಿನ ಜಗಳದಲ್ಲಿ ಗಂಡ ಹೆಂಡತಿಯನ್ನು ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾನೆ. ಆತ್ಮಹತ್ಯೆಗೆ ಯತ್ನಿಸಿ ಗಂಭೀರವಾಗಿರುವ ಪತಿಯನ್ನು ‌ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಪುತ್ತೂರು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ‌ತಿಳಿದು ಬರಬೇಕಿದೆ.



























































 
 
error: Content is protected !!
Scroll to Top