ಸೋಷಿಯಲ್ ಮೀಡಿಯಾದಲ್ಲಿ ಕೋಮು ಪ್ರಚೋದನೆ ಪೋಸ್ಟ್ ಹಾಕಿದ ಆರೋಪದಲ್ಲಿ ಬಂಧನ
ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆಯ ಪೋಸ್ಟ್ ಹಾಕಿದ ಆರೋಪದಲ್ಲಿ ಬಂಧಿತಳಾಗಿದ್ದ ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಯುವತಿಗೆ ಮಧ್ಯಂತರ ಜಾಮೀನು ಲಭಿಸಿದ್ದು ಆಕೆ ಬಿಡುಗಡೆಯಾಗಿದ್ದಾಳೆ. ಜಾಮೀನು ಪಡೆದ ಬಳಿಕ ಆಕೆಯೊಂದಿಗಿನ ಫೊಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಶಾಸಕ ಹರೀಶ್ ಪೂಂಜ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ರಾಜಕೀಯದ ವಿರುದ್ಧ ಗೆಲುವು ಲಭಿಸಿದೆ ಎಂದು ಬರೆದಿದ್ದಾರೆ
ಶಾಸಕರ ಫೇಸ್‌ಬುಕ್ ಪೋಸ್ಟ್ ವೈರಲ್ ಆಗಿದೆ.
ಭಯೋತ್ಪಾದನಾ ವಿರೋಧಿ ಹಿಂದೂ ಪರವಾದ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಚಾರವಾಗಿ ಕಾಂಗ್ರೆಸ್ ಸರ್ಕಾರ ನಮ್ಮ ಬೆಳ್ತಂಗಡಿಯ ಕರಂಬಾರು ಗ್ರಾಮದ ವಿದ್ಯಾ ಎನ್ನುವ ದಲಿತ ಹೆಣ್ಣು ಮಗಳೊಬ್ಬಳನ್ನು ಏಕಾಏಕಿ ಬಂಧಿಸಿ ತನ್ನ ತುಷ್ಟಿಕರಣ ರಾಜಕೀಯದ ಕರಾಳ ಮುಖದ ಅನಾವರಣ ನಡೆಸಿತ್ತು.
ಆದರೆ ಈ ನೆಲದ ಕಾನೂನು ಕಾಂಗ್ರೆಸ್ ಸರ್ಕಾರದ ನೀಚ ರಾಜಕೀಯಕ್ಕೆ ಎಡೆಮಾಡಿಕೊಡಲಿಲ್ಲ ಮಧ್ಯರಾತ್ರಿ ಒಂದು ಗಂಟೆಗೆ ನ್ಯಾಯಾಧೀಶರು ಪ್ರಕರಣದ ವಾಸ್ತವವನ್ನು ಅರಿತು ಹೆಣ್ಣು ಮಗಳಿಗೆ ಮಧ್ಯಂತರ ಜಾಮೀನು ನೀಡಿ ಕಾನೂನಿನ ರಕ್ಷಣೆ ನೀಡಿದ್ದಾರೆ. ಈ ಮೂಲಕ ಈ ನೆಲದ ಕಾನೂನಿನ ಮೇಲಿನ ಭರವಸೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಕಾನೂನು ಹೋರಾಟದಲ್ಲಿ ಸಹಕರಿಸಿದ ವಕೀಲ ಮಿತ್ರರಾದ ಅಜಯ್ ಸುವರ್ಣ ಹಾಗೂ ಸಂತೋಷ್ ಶೆಟ್ಟಿ ಅವರಿಗೆ ಧನ್ಯವಾದಗಳು. ದಲಿತರನ್ನು ಟಾರ್ಗೆಟ್ ಮಾಡಿ ಬಂಧಿಸುವ ಬೆಳ್ತಂಗಡಿ ನೀಚ ಕಾಂಗ್ರೆಸ್ ನಾಯಕರು ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.



























