ತಲೆನೋವಿಗೆ ‌ಮನೆಯಲ್ಲೇ ಇದ್ದ ಔಷಧ ಸೇವಿಸಿ ಬಾಲಕ ಸಾವು

ಕಡಬ: ತಲೆನೋವಿಗೆಂದು ‌ಮನೆಯಲ್ಲೇ ಇದ್ದ ಔಷಧ ಕುಡಿದ ಪರಿಣಾಮ 10 ವರ್ಷದ ಬಾಲಕ ಮೃತ ಪಟ್ಟ ಘಟನೆ ರಾಮಕುಂಜದಲ್ಲಿ ‌ನಡೆದಿದೆ.

ಈ ಸಂಬಂಧ ಮೃತ ಬಾಲಕನ ತಂದೆ ಸಂಜೀವ ಪೂಜಾರಿ ಅವರು ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಅವರ ಪುತ್ರನಿಗೆ ‌ಪದೇ ಪದೇ ತಲೆನೋವು ಕಾಣಿಸಿಕೊಂಡಿದೆ. ಮಾ. 18 ರಂದು ತಲೆನೋವು ಎಂದು ಹುಡುಗ ಮನೆಯಲ್ಲೇ ಇದ್ದ ಔಷಧ ಕುಡಿದಿದ್ದಾನೆ. ಆ ಬಳಿಕ ಆರೋಗ್ಯ ಹದೆಗೆಟ್ಟು ಬಾಲಕ ಕಂಗಾಲಾಗಿ ‌ನರಳಿದ್ದಾನೆ. ತಕ್ಷಣವೇ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬಾಲಕನನ್ನು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆ ವೇಳೆಗೆ ಬಾಲಕ ಮೃತಪಟ್ಟಿದ್ದಾಗಿ ‌ತಿಳಿದು ಬಂದಿದೆ.



























































 
 
error: Content is protected !!
Scroll to Top