ನವದೆಹಲಿ: ಯುಗಾದಿ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲಿಯೂ ಶುಭಾಶಯಗಳನ್ನು ತಿಳಿಸುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.
ಹೊಸ ವರ್ಷ, ವಸಂತ ಋತುವಿನ ಆಗಮನ ಪ್ರತಿಯೊಬ್ಬರ ಬದುಕಿನಲ್ಲಿಯೂ ಹೊಸ ಉತ್ಸಾಹ ಮತ್ತು ಅವಕಾಶಗಳನ್ನು ತರಲಿ ಎಂದು ಹಾರೈಸಿದ್ದಾರೆ.
ಪ್ರಕೃತಿಯಲ್ಲಿನ ಹಸಿರು, ಹೂವುಗಳ ಸುವಾಸನೆ, ಹಣ್ಣುಗಳ ಆಗಮನ ಹೊಸ ಶಕ್ತಿಯ ಸಂಕೇತ. ರೈತಾಪಿ ವರ್ಗ ಈ ಸಂದರ್ಭದಲ್ಲಿ ಹೊಸ ಕೃಷಿ ಚಟುವಟಿಕೆಗಳಿಗೆ ತೊಡಗಲು ಸಿದ್ಧತೆ ನಡೆಸುತ್ತಿರುವ ಬಗೆಗೂ ಆವರು ಹರ್ಷ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಬದುಕಿನ ಸಿಹಿ – ಕಹಿಗಳೆರಡನ್ನೂ ಸಮಾನವಾಗಿ ಸ್ವೀಕಾರ ಮಾಡುವ ಬದುಕಿನ ಸಂದೇಶವನ್ನು ಯುಗಾದಿ ಸಾರುತ್ತದೆ ಎಂದವರು ಹೇಳಿದ್ದಾರೆ. ಈ ಹಬ್ಬ ಪ್ರತಿಯೊಬ್ಬರ ಬದುಕಿನಲ್ಲಿ ಹೊಸ ಭರವಸೆ, ಸಕಾರಾತ್ಮಕ ಬದಲಾವಣೆ ತರಲಿ ಎಂದಿರುವ ಅವರು ‘ನನ್ನ ಎಲ್ಲಾ ಸಹೋದರ ಸಹೋದರಿಯರಿಗೂ ಯುಗಾದಿ ಹಬ್ಬದ ಶುಭಾಶಯಗಳು’ ಎಂದು ತಿಳಿಸಿದ್ದಾರೆ.



























