ಇರಾನ್‌ನ ಇನ್ನೋರ್ವ ಪ್ರಮುಖ ನಾಯಕನ ಹತ್ಯೆ

ಇಸ್ರೇಲ್‌ ದಾಳಿಗೆ ಬಲಿಯಾದ ಭದ್ರತಾ ಸಚಿವ ಎಸ್ಮಾಯಿಲ್‌ ಖತೀಬ್‌

ನವದೆಹಲಿ : ಇರಾನ್‌ನ ಭದ್ರತಾ ಸಚಿವ ಅಲಿ ಲಾಲಿಜಾರಿಯನ್ನು ಸಾಯಿಸಿದ ಬೆನ್ನಿಗೆ ಇನ್ನೋರ್ವ ಸಚಿವನನ್ನು ಇಸ್ರೇಲ್‌ ಬಲಿತೆಗೆದುಕೊಂಡಿದೆ. ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್​ನ ಗುಪ್ತಚರ ಸಚಿವ ಮೃತಪಟ್ಟಿದ್ದಾರೆ. ಗುಪ್ತಚರ ಇಲಾಖೆಯ ಎಸ್ಮಾಯಿಲ್ ಖತೀಬ್ ಹತ್ಯೆಯನ್ನು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ದೃಢಪಡಿಸಿದ್ದಾರೆ. ಈ ದಾಳಿಯನ್ನು ಅವರು ಹೇಡಿತನದ ಹತ್ಯೆ ಎಂದು ಕರೆದಿದ್ದಾರೆ.

ಇಸ್ರೇಲ್ ಪಡೆಗಳು ಟೆಹ್ರಾನ್ ಮೇಲೆ ರಾತ್ರಿಯಿಡೀ ನಡೆಸಿದ ವೈಮಾನಿಕ ದಾಳಿ ನಡೆಸಿ ಸಚಿವ ಎಸ್ಮಾಯಿಲ್ ಅವರನ್ನು ಹತ್ಯೆ ಮಾಡಿವೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಇರಾನ್ ಕೂಡ ಈ ಬಗ್ಗೆ ದೃಢಪಡಿಸಿದೆ.



























































 
 

ಇರಾನ್‌ನಾದ್ಯಂತ ಇತ್ತೀಚೆಗೆ ನಡೆದ ಪ್ರತಿಭಟನೆ ನಿಗ್ರಹದಲ್ಲಿ ಎಸ್ಮಾಯಿಲ್ ಖತೀಬ್ ಮಹತ್ವದ ಪಾತ್ರ ವಹಿಸಿದ್ದಾರೆ. ಪ್ರತಿಭಟನಾಕಾರರ ಬಂಧನ ಮತ್ತು ಹತ್ಯೆ ಸೇರಿದಂತೆ ಪ್ರಮುಖ ನಿರ್ಧಾರಗಳಲ್ಲಿ ಅವರು ಪಾತ್ರ ವಹಿಸಿದ್ದರು. ಅವರು ಇಸ್ರೇಲಿಗಳು ಮತ್ತು ಅಮೆರಿಕನ್ನರ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳನ್ನು ಮುನ್ನಡೆಸಿದ್ದಾರೆ ಎಂದು ಐಡಿಎಫ್ ಹೇಳಿತ್ತು.

ಎಸ್ಮಾಯಿಲ್ ಖತೀಬ್ ಒಬ್ಬ ಶಿಯಾ ಧರ್ಮಗುರು. ಅವರು ಇರಾನ್‌ನ ನ್ಯಾಯಾಂಗ ಮತ್ತು ಗುಪ್ತಚರ ಸಚಿವಾಲಯದಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದರು. ಅವರು 1980ರ ದಶಕದಲ್ಲಿ ಇರಾನ್-ಇರಾಕ್ ಯುದ್ಧದ ಸಮಯದಲ್ಲಿ ಕ್ರಾಂತಿಕಾರಿ ಗಾರ್ಡ್‌ನಲ್ಲಿಯೂ ಸೇವೆ ಸಲ್ಲಿಸಿದ್ದರು. ಅಲ್ಲಿ ಅವರು ಯುದ್ಧದಲ್ಲಿ ಗಾಯಗೊಂಡಿದ್ದರು.

ಫೆಬ್ರವರಿ 28ರಂದು ಇರಾನ್ ಮೇಲೆ ಯುಎಸ್-ಇಸ್ರೇಲ್ ದಾಳಿಗಳನ್ನು ನಡೆಸಿ ಇರಾನ್​ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಕೊಂದ ನಂತರ ಶುರುವಾದ ಯುದ್ಧವು ಎರಡು ವಾರಗಳಿಗೂ ಹೆಚ್ಚು ಕಾಲದಿಂದ ಉಲ್ಬಣಗೊಳ್ಳುತ್ತಿದೆ. ಅಂದಿನಿಂದ ಎರಡೂ ಕಡೆಯವರು ಪ್ರತೀಕಾರದ ದಾಳಿಗಳನ್ನು ನಡೆಸಿದ್ದು, ಮಧ್ಯಪ್ರಾಚ್ಯದಾದ್ಯಂತ ಉದ್ವಿಗ್ನತೆಯನ್ನು ಹೆಚ್ಚಿಸಿದೆ.

error: Content is protected !!
Scroll to Top