ಹದಿನೈದು ದಿನದ ಹಸುಗೂಸು ಅನುಮಾನಾಸ್ಪದ ಸಾವು: ತಂದೆಯೇ ‌ಕೊಲೆಗೈದಿರುವ ಸಂದೇಹ

ಬೆಳಗಾವಿ: ಹದಿನೈದು ದಿನಗಳ ಹೆಣ್ಣುಗೂಸು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದ್ದು, ಮಗುವಿನ ತಂದೆಯೇ ವಿಷವುಣಿಸಿ ಕೊಲೆ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ.

ಮಗುವನ್ನು ಪ್ರಿಯಾಂಕಾ ಎಂದು ಗುರುತಿಸಲಾಗಿದೆ. ಹೆರಿಗೆಯ ಬಳಿ ಶೀಲಾ ಅವರು ತವರು ಮನೆಯಲ್ಲಿದ್ದರು. ಈ ಸಂದರ್ಭದಲ್ಲಿ ಶೀಲಾ ಪತಿ ಭೀಮರಾಯ ಹೆಂಡತಿ ಮತ್ತು ಮಗುವನ್ನು ನೋಡಲು ಅಲ್ಲಿಗೆ ಆಗಮಿಸಿದ್ದಾನೆ. ಆತ ಬಂದು ಹೋದ ಕೆಲ ಹೊತ್ತಿನಲ್ಲೇ ಆರೋಗ್ಯವಾಗಿದ್ದ ಮಗು ಏಕಾಏಕಿ ಮೃತಪಟ್ಟಿದೆ.

ಈ ಸಾವು ಮನೆಯವರನ್ನು ಬೆಚ್ಚಿ ಬೀಳಿಸಿದೆ. ಈ ವೇಳೆ ಭೀಮರಾಯನ ಅನುಮಾನಾಸ್ಪದ ವರ್ತನೆ ಮನೆಯವರಲ್ಲಿ ಸಂದೇಹ ಸೃಷ್ಟಿಸಿದೆ. ಆತ ಮಗುವಿಗೆ ಸಣ್ಣ ಮಾತ್ರೆ ತಂದು ಕುಡಿಸಿದ್ದಾನೆ. ಅದರಿಂದಲೇ ಮಗು ಮೃತಪಟ್ಟಿದೆ ಎಂದು ಮಗುವಿನ ತಾಯಿ ಶೀಲಾ ಮತ್ತು ಕುಟುಂಬಸ್ಥರು ಆರೋಪಿಸಿದ್ದಾರೆ.



























































 
 

ಹಾಗೆಯೇ, ಇದಕ್ಕೆ ಪೂರಕ ಎಂಬಂತೆ ತಾಯಿ ಮತ್ತು ಮಗುವನ್ನು ನೋಡಿ ಹೋದ ಭೀಮರಾಯ ನಾಪತ್ತೆಯಾಗಿದ್ದಾನೆ. ಕುಟುಂಬ ಸದಸ್ಯರು ಮಗುವಿನ ಶವವನ್ನು ಭಿಮ್ಸ್ ಆಸ್ಪತ್ರೆಯ ಮುಂದಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ನಾಪತ್ತೆಯಾದ ಭೀಮರಾಯನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಹಾಗೆಯೇ ಮಗುವಿನ ಶವದ ಮರಣೋತ್ತರ ಪರೀಕ್ಷೆಯ ಬಳಿಕ ಸಾವಿನ ರಹಸ್ಯ ಬಯಲಾಗಲಿದೆ.

error: Content is protected !!
Scroll to Top