ಆಕಸ್ಮಿಕವಾಗಿ ಬಾವಿಗೆ ಬಿದ್ದ ಎರಡು ವರ್ಷದ ಮಗುವಿನ ರಕ್ಷಣೆ

ಕಾರವಾರ: ಆಟವಾಡುತ್ತಿದ್ದ ಎರಡು ವರ್ಷದ ಮಗುವೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದು, ಆ ಮಗುವನ್ನು ವ್ಯಕ್ತಿಯೊಬ್ಬ ರಕ್ಷಣೆ ಮಾಡಿದ ಘಟನೆ ಶಿರಸಿಯ ಕಸ್ತೂರ್ಬಾ ‌ನಗರದಲ್ಲಿ ನಡೆದಿದೆ.

ಬಾವಿಗೆ ಬಿದ್ದ ಮಗುವನ್ನು ಭುವಿ(2) ಎಂದು ಗುರುತಿಸಲಾಗಿದೆ.

ಮಗು ಮನೆಯಲ್ಲಿ ಕಾಣದೇ ಇದ್ದಾಗ ಗಾಬರಿಯಾದ ಅಜ್ಜಿ ಹುಡುಕಾಡಲು ಆರಂಭಿಸಿದ್ದಾರೆ. ಹುಡುಕುತ್ತಾ ಬಾವಿಯ ಹತ್ತಿರ ಹೋದಾಗ ಬಾವಿಯಿಂದ ಮಗು ಅಳುವ ಶಬ್ಧ ಕೇಳಿಸಿದೆ. ಇಣುಕಿದಾಗ ಮಗು ಬಾವಿಗೆ ಇಳಿಸಲಾಗಿದ್ದ ಪಂಪ್‌ನ ‌ಹಗ್ಗದಲ್ಲಿ ನೇತಾಡುತ್ತಾ ಅಳುವುದು ಕಂಡು ಬಂದಿದೆ.



























































 
 

ತಕ್ಷಣವೇ ಸಮೀಪದ ಫಯಾಜ್ ಚೌಟಿ ಎಂಬವರು ಸ್ಥಳಕ್ಕೆ ಧಾವಿಸಿ ಬಂದು ಬಾವಿಗಿಳಿದು ‌ಮಗುವನ್ನು ರಕ್ಷಣೆ ಮಾಡಿದ್ದಾರೆ.

error: Content is protected !!
Scroll to Top