ರಾಜ್ಯದ ಮೂರನೇ ಅತಿ ಎತ್ತರದ ಧ್ವಜಸ್ತಂಭದಲ್ಲಿ ಹಾರಾಡುತ್ತಿದ್ದ ರಾಷ್ಟ್ರಧ್ವಜ
ಪುತ್ತೂರು: ನೆಲ್ಲಿಕಟ್ಟೆ ಉದ್ಯಾನದಲ್ಲಿ ಸ್ಥಾಪಿಸಲಾಗಿದ್ದ ರಾಜ್ಯದ ಮೂರನೇ ಅತಿ ಎತ್ತರದ ಧ್ವಜಸ್ತಂಭದಲ್ಲಿ ಹಾರಾಡುತ್ತಿದ್ದ ದೊಡ್ಡ ಗಾತ್ರದ ರಾಷ್ಟ್ರಧ್ವಜ ಸೋಮವಾರ ರಾತ್ರಿ ಬೀಸಿದ ಭಾರಿ ಗಾಳಿಮಳೆಗೆ ಧರಾಶಾಯಿಯಾಗಿದೆ.
ಭಾರಿ ಗಾಳಿಮಳೆಗೆ ಧ್ವಜದ ದಾರ ಕಡಿದು ಧ್ವಜ ಸಮೀಪ ವಿದ್ಯುತ್ ತಂತಿಯ ಮೇಲೆ ಬಿದ್ದಾಗ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಇದರ ಪರಿಣಾಮ ತುಸು ಹೊತ್ತು ವಿದ್ಯುತ್ ಕೈಕೊಟ್ಟಿತ್ತು.
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ಧ್ವಜವನ್ನು ಅಲ್ಲಿಂದ ತೆರವುಗೊಳಿಸಿ ಗೌರವಪೂರ್ವಕಾವಗಿ ಸಾಗಿಸಿದರು.
ಕಳೆದ ಫೆ.17ರಲ್ಲಷ್ಟೇ ಈ ಧ್ವಜಸ್ತಂಭವನ್ನು ಉದ್ಘಾಟಿಸಲಾಗಿತ್ತು. ತಾಲೂಕು ಮಟ್ಟದಲ್ಲಿ ಇದೇ ಅತಿ ಎತ್ತರದ ಧ್ವಜಸ್ತಂಭ ಎನ್ನಲಾಗುತ್ತಿದೆ. ರಾಜ್ಯದಲ್ಲಿ ಮೂರನೇ ಅತಿ ಎತ್ತರದ ಧ್ವಜಸ್ತಂಭ ಎಂಬ ಹಿರಿಮೆಯನ್ನು ಹೊಂದಿದೆ. ಗಾಳಿಯ ಬಿರುಸಿಗೆ ಧ್ವಜಸ್ತಂಭ ತುಸು ವಾಲಿರುವಂತೆ ಕಂಡುಬರುತ್ತಿದೆ.



























