ಸದನದಲ್ಲಿ ‌ಗರಂ ಆಗಿ ಪೀಠ ಬಿಟ್ಟು ನಡೆದ ಸ್ಪೀಕರ್ ಯು.ಟಿ. ಖಾದರ್

ಬೆಂಗಳೂರು: ಶಾಸಕರು ಪ್ರಶ್ನೆಗಳಿಗೆ ವಿಧಾನಸಭಾ ಅಧಿವೇಶನದಲ್ಲಿ ಸಚಿವರು ಸೂಕ್ತ ಉತ್ತರ ನೀಡದೇ ಇದ್ದು, ಸಚಿವರ ನಡೆಗೆ ಅಸಮಾಧಾನ ಸೂಚಿಸಿ ಸ್ಪೀಕರ್ ಯು.ಟಿ. ಖಾದರ್ ಸದನ ಮುಗಿಸಲು ಕಾಲ ಮಿತಿ ನೀಡದೆ ಪೀಠ ಬಿಟ್ಟು ನಡೆದ ಘಟನೆ ನಡೆದಿದೆ.

ಸಚಿವ ಪರಮೇಶ್ವರ್ ಅವರು ಸದನದಲ್ಲಿ ಉತ್ತರ ಮಂಡಿಸುತ್ತಿದ್ದರು. ಈ ಸಂದರ್ಭದಲ್ಲಿ ವಿಪಕ್ಷ ಸದಸ್ಯರು ಟೀಕೆ ಆರಂಭ ಮಾಡಿದ್ದಾರೆ.

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ವಿರೋಧ ವ್ಯಕ್ತಪಡಿಸಿ, ನಿಯಮಾವಳಿಗಳನ್ನು ಸರ್ಕಾರ ಪಾಲನೆ ಮಾಡುತ್ತಿಲ್ಲ. ಸದನದಲ್ಲಿ ನಿರ್ಧಿಷ್ಟ ಉತ್ತರ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.

























































 
 

ಈ ಬಗ್ಗೆ ಸ್ಪೀಕರ್ ಯು.ಟಿ. ಖಾದರ್ ಅವರು ಮೂರು ಬಾರಿ ಸಚಿವರುಗಳಿಗೆ ಸೂಚನೆ ನೀಡಿದರೂ ಸುಧಾರಣೆ ಕಂಡಿಲ್ಲ. ಆದ್ದರಿಂದ ಅವರು ಸಂಬಂಧಪಟ್ಟ ಸಚಿವರು ಸ್ಪಷ್ಟನೆ ನೀಡುವ ವರೆಗೂ ಸದನ ನಡೆಸುವುದಿಲ್ಲ ಎಂದು ಘೋಷಿಸಿ ಪೀಠ ಬಿಟ್ಟು ಹೊರ ನಡೆದಿದ್ದಾರೆ.

ಈ ಘಟನೆಯಿಂದ ಸರ್ಕಾರಕ್ಕೆ ದೊಡ್ಡ ಟಾಪ್‌ ಅಪ್ ನಂಥ ಸೂಚನೆ ನೀಡಲಾಯಿತು. ಶಾಸಕರು ಹೇಳಿದರು, 40 ದಿನಗಳ ಅಧಿವೇಶನದಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರ ಸಿಗದಿದ್ದರೆ, ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ವಿಧಾನಸಭೆ ಇತಿಹಾಸದಲ್ಲಿ ಸ್ಪೀಕರ್ ಪೀಠ ಬಿಟ್ಟು ಹೋಗುವ ಈ ಘಟನೆ ವಿಶೇಷ ದಾಖಲೆ ಎಂಬುದಾಗಿ ಗಮನ ಸೆಳೆದಿದೆ.

error: Content is protected !!
Scroll to Top