ಚಿಕ್ಕಮಗಳೂರು: ಖಾಸಗಿ ಬಸ್ ಒಂದು ಕರೆಂಟ್ ಕಂಬಕ್ಕೆ ಗುದ್ದಿದ್ದು, ಯಾವುದೇ ದೊಡ್ಡ ಮಟ್ಟದ ಅನಾಹುತ ನಡೆಯದೇ ಪವಾಡಸದೃಶ ಪಾರಾದ ಘಟನೆ ಎನ್. ಆರ್. ಪುರ ತಾಲೂಕಿನ ಸಂಗಮೇಶ್ವರಪೇಟೆಯ ಬಳಿ ನಡೆದಿದೆ.
ಎದುರಿಗೆ ಬಂದ ವಾಹನವೊಂದಕ್ಕೆ ದಾರಿ ನೀಡಲು ಖಾಸಗಿ ಬಸ್ಸಿನ ಚಾಲಕರು ಮುಂದಾಗಿದ್ದಾರೆ. ಆದರೆ ಮಳೆಯ ಕಾರಣದಿಂದ ಜಾರುತ್ತಿದ್ದ ರಸ್ತೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿದೆ.
ಢಿಕ್ಕಿಯಾದ ರಭಸಕ್ಕೆ ಕಂಬ ಹಲ್ಲಿನ ಮೇಲೆಯೇ ಮುರಿದು ಬಿದ್ದಿದೆ. ವಿದ್ಯುತ್ ಸಂಪರ್ಕ ತಕ್ಷಣ ಕಡಿತವಾದ ಕಾರಣದಿಂದ ಭಾರೀ ಪ್ರಮಾಣದ ಅನಾಹುತ ತಪ್ಪಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಪಾರಾಗಿದ್ದಾರೆ.
ಬಾಳೆಹೊನ್ನೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.


























