ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಸಾವಿನ ಸುದ್ದಿ ನಿರಾಕರಿಸಿದ ಇಸ್ರೇಲ್‌

ನೆತನ್ಯಾಹು ಕ್ಷೇಮವಾಗಿದ್ದಾರೆ ಎಂದು ಪ್ರಧಾನಿ ಕಚೇರಿಯಿಂದ ಸ್ಪಷ್ಟನೆ

ಜೆರುಸಲೇಂ: ಇರಾನ್‌ ದಾಳಿಯಲ್ಲಿ ಇಸ್ರೇಲ್‌ ಪ್ರಧಾನಮಂತ್ರಿ ಬೆಂಜಮಿನ್‌ ನೆತನ್ಯಾಹು ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯನ್ನು ಇಸ್ರೇಲ್‌ ನಿರಾಕರಿಸಿದೆ. ನೆತನ್ಯಾಹು ಕ್ಷೇಮವಾಗಿದ್ದಾರೆ, ಅವರು ಸಾವನ್ನಪ್ಪಿದ್ದಾರೆಂಬ ವರದಿ ಸುಳ್ಳು ಎಂದು ಪ್ರಧಾನಿ ಕಚೇರಿ ಸ್ಪಷ್ಟಪಡಿಸಿದೆ.

ನೆತನ್ಯಾಹು ತಮ್ಮ ಎಕ್ಸ್ ಖಾತೆಯಲ್ಲಿ, ಯುದ್ಧದ ಕುರಿತು ಪತ್ರಿಕಾಗೋಷ್ಠಿಯ ವೀಡಿಯೊವನ್ನು ಹಂಚಿಕೊಂಡಿದ್ದರು. ಈ ವೀಡಿಯೊದಲ್ಲಿ ನೆತನ್ಯಾಹು ಅವರ ಬಲಗೈಯಲ್ಲಿ ಆರು ಬೆರಳುಗಳಿರುವಂತೆ ಕಾಣಿಸುತ್ತದೆ. ಈ ವೀಡಿಯೊವನ್ನು ಕೃತಕ ಬುದ್ಧಿಮತ್ತೆಯಿಂದ ರಚಿಸಲಾಗಿದೆ. ನೆತನ್ಯಾಹು ಈಗ ಇಲ್ಲ ಎಂಬ ವದಂತಿ ಹರಡಿತ್ತು. ನೆತನ್ಯಾಹು ತನ್ನ ಕೈಗಳನ್ನು ಎತ್ತಿದಾಗ ಕಿರುಬೆರಳಿನ ಪಕ್ಕದಲ್ಲಿ ಮತ್ತೊಂದು ಬೆರಳು ಕಂಡುಬಂದಿದೆ. ಇದನ್ನು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು, ಆರನೇ ಬೆರಳು ಎಂದು ಹೇಳಿದ್ದಾರೆ. ಇದು ‘ಕ್ಲಾಸಿಕ್ AI ಬೆರಳಿನ ದೋಷ’ ಎಂದು ತಿಳಿಸಿದ್ದಾರೆ.

























































 
 

Xನ AI ಚಾಟ್‌ಬಾಟ್ ಗ್ರೋಕ್ ಆರು ಬೆರಳುಗಳ ಕುರಿತಾದ ಹೇಳಿಕೆಗಳ ಸತ್ಯ ಪರಿಶೀಲಿಸಿ, ‘ಇಲ್ಲ, ಬೆಂಜಮಿನ್ ನೆತನ್ಯಾಹು ಅವರಿಗೆ ಆರು ಬೆರಳುಗಳಿಲ್ಲ ಎಂದು ಸ್ಪಷ್ಟಪಡಿಸಿದೆ. ಇಸ್ರೇಲ್‌ನ ಸರ್ಕಾರಿ ಪತ್ರಿಕಾ ಕಚೇರಿಯ ಅಧಿಕೃತ ದೃಶ್ಯಗಳು, ನೆತನ್ಯಾಹು ಅವರ ಕೈಯಲ್ಲಿ ಐದು ಬೆರಳುಗಳು ಮಾತ್ರ ಇರುವುದರ ಬಗ್ಗೆ ಸ್ಪಷ್ಟಪಡಿಸಿವೆ.

error: Content is protected !!
Scroll to Top