ತನ್ನೂರಿನ ಜಾತ್ರೆಗೆ ಒಂದು ಲೋಡ್‌ ಸಿಲಿಂಡರ್‌ ಕೊಡಿಸಿದ ಸಿದ್ದರಾಮಯ್ಯ?

200-250 ಸಿಲಿಂಡರ್‌ ಸಿದ್ದರಾಮಯ್ಯ ಜಾತ್ರೆಗೆ ಕೊಡಿಸಿದ್ದಾರೆ ಎಂದು ಆರೋಪ

ಮೈಸೂರು: ತನ್ನ ಊರಿನ ಜಾತ್ರೆಯ ಭೋಜನ ಪ್ರಸಾದ ತಯಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಭಾವ ಬಳಸಿ ಒಂದು ಲೋಡ್‌ ಗ್ಯಾಸ್‌ ಸಿಲಿಂಡರ್‌ ಕೊಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರ ವರಕೊಡುನಲ್ಲಿ ಜಾತ್ರೆ ಹಿನ್ನೆಲೆ ಸಿಎಂ ತಮ್ಮ ಪ್ರಭಾವ ಬಳಸಿ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ದಾರೆ.

ಶುಕ್ರವಾರ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದ ವರಕೊಡುನಲ್ಲಿ ದೊಡ್ಡ ಜಾತ್ರೆ ನಡೆಯಿತು. ಜಾತ್ರೆಗೆ ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಇತ್ತು. ಪ್ರಸಾದ ತಯಾರಿಕೆಗೆ ಸಿಎಂ ಸಿದ್ದರಾಮಯ್ಯ ಅವರೇ ತಮ್ಮ ಪ್ರಭಾವ ಬಳಸಿ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ದಾರೆ. ಸುಮಾರು 200-250 ಸಿಲಿಂಡರನ್ನು ಸಿದ್ದರಾಮಯ್ಯ ತಮ್ಮ ಕ್ಷೇತ್ರದ ಜಾತ್ರೆಗೆ ಕೊಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

























































 
 

ಮೈಸೂರು ಹೋಟೆಲ್ ಸಂಘದ ಅಧ್ಯಕ್ಷ ನಾರಾಯಣ ಗೌಡ ಈ ವಿಚಾರ ಬಹಿರಂಗಪಡಿಸಿದ್ದಾರೆ. ಸಿಎಂ ಮನಸ್ಸು ಮಾಡಿದರೆ ಏನೂ ಬೇಕಾದರು ಆಗುತ್ತದೆ. ಜಾತ್ರೆಗೂ ಎರಡು ದಿನ ಮೊದಲೇ ಡಿಸಿ ಜೊತೆ ಮಾತನಾಡಿ ಸಿಲಿಂಡರ್ ಕೊಡಿಸಿದ್ದಾರೆ. ಹೀಗಾಗಿ ಹೋಟೆಲ್‌ಗಳಿಗೂ ಕೂಡ ದಿನಕ್ಕೆ ಒಂದೋ ಎರಡೋ ಸಿಲಿಂಡರ್ ಕೊಡಿಸಲು ಸಿಎಂ ಪ್ರಭಾವ ಬೀರಬೇಕು. ಮೈಸೂರಿನಲ್ಲಿ ಸುಮಾರು ಪ್ರತಿನಿತ್ಯ 4,000 ಸಿಲಿಂಡರ್ ಬಳಸಲಾಗುತ್ತದೆ. ಅಷ್ಟು ಸಾಧ್ಯವಿಲ್ಲವೆಂದರೂ ಕನಿಷ್ಠ 700-800 ಸಿಲಿಂಡರ್ ಲಭ್ಯವಾಗುವಂತೆ ಸಿಎಂ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

error: Content is protected !!
Scroll to Top