ಭಾರತ ವಿರೋಧಿ ಶಕ್ತಿಗಳ ಕೈಗೊಂಬೆಯಾಗಿದೆ ಕಾಂಗ್ರೆಸ್ : ಪ್ರಧಾನಿ ಮೋದಿ

ಅಸ್ಸಾಂ: ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ಧಕ್ಕೆ ಸಂಬಂಧಿಸಿದಂತೆ ಒಂದು ಹಳೆಯ ಪಕ್ಷ ಭಾರತೀಯರಲ್ಲಿ ಆತಂಕ ಸೃಷ್ಟಿ ಮಾಡಲು ಪ್ರಯತ್ನ ನಡೆಸುತ್ತಿದೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.

ನಮ್ಮ ಸರ್ಕಾರ ಈ ಸಂಘರ್ಷದ ಪರಿಣಾಮ ನಮ್ಮ ನಾಗರಿಕರ ಮೇಲೆ ಕಡಿಮೆಯಾಗುವಂತೆ ಮಾಡಲು ಪ್ರಯತ್ನವನ್ನು ಮಾಡುತ್ತಿದೆ. ಹಲವು ಜಾಗತಿಕ ಶಕ್ತಿಗಳಿಗೆ ಭಾರತದ ತ್ವರಿತ ಅಭಿವೃದ್ಧಿಯನ್ನು ಜೀರ್ಣ ಮಾಡಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಅಂತಹ ಶಕ್ತಿಗಳ ಕೈಯಲ್ಲಿ ಕಾಂಗ್ರೆಸ್ ಕೈಗೊಂಬೆಯಂತಾಗಿದೆ. ದೇಶದ ಹಿತಾಸಕ್ತಿಯ ವಿಷಯದಲ್ಲಿ ಕಾಂಗ್ರೆಸ್ ಮತ್ತೆ ವಿಫಲವಾಗಿದೆ ಎಂದು ಅವರು ಕಿಡಿ ಕಾರಿದ್ದಾರೆ.

ನಮ್ಮ ಭಾರತೀಯರು ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಸಮಸ್ಯೆಗಳನ್ನು ಎದುರಿಸುವಂತೆ ನೋಡಿಕೊಳ್ಳುವ ದೃಷ್ಟಿಯಿಂದ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಮಧ್ಯಪ್ರಾಚ್ಯ ಯುದ್ಧದ ಬಿಸಿ ನಮ್ಮ ಭಾರತೀಯರಿಗೆ ತಟ್ಟದಂತೆ ಪ್ರಯತ್ನ ನಡೆಸುವುದು ನಮ್ಮ ಉದ್ದೇಶ. ಇಂತಹ ನಿರ್ಣಾಯಕ ಹಂತದಲ್ಲಿ ಕಾಂಗ್ರೆಸ್ ಒಂದು ಜವಾಬ್ದಾರಿಯುತ ಪಕ್ಷ ಎಂಬುದನ್ನು ಸಾಬೀತು ಮಾಡುವಲ್ಲಿ ವಿಫಲವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

























































 
 

error: Content is protected !!
Scroll to Top