ಮಡಿಕೇರಿ: ಕೆರೆಯಲ್ಲಿ ಈಜಾಟ ನಡೆಸಲು ಹೋಗಿದ್ದ ಕಾರ್ಮಿಕನೊಬ್ಬ ಮುಳುಗಿ ಸಾವನ್ನಪ್ಪಿದ ಘಟನೆ ಸಿದ್ಧಾಪುರ ಠಾಣಾ ವ್ಯಾಪ್ತಿಯ ಹಾಲುಗುಂದದಲ್ಲಿ ನಡೆದಿದೆ.
ಮೃತನನ್ನು ಕಾಫಿ ತೋಟದ ಕಾರ್ಮಿಕನಾಗಿದ್ದ ಅಣ್ಣಪ್ಪ (26) ಎಂದು ಗುರುತಿಸಲಾಗಿದೆ.
ಅಣ್ಣಪ್ಪ ಅವರು ಗುರುವಾರ ಸಂಜೆ ಕಾಫಿ ತೋಟದ ಕೆರೆಗೆ ಈಜಾಟಕ್ಕೆ ಹೋಗಿದ್ದರು. ಈ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅಣ್ಣಪ್ಪನ ಜೊತೆ ಕೆಲಸ ಮಾಡುತ್ತಿದ್ದ ಇತರ ಕಾರ್ಮಿಕರು ಅವರಿಗಾಗಿ ಹುಡುಕಾಟ ನಡೆಸಿದಾಗ ಕೆರೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಮೃತ ತಾಯಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


























