ಮಂಗಳೂರು, ಅಂಬೇಡ್ಕರ್ ಭವನ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರದಾನ

ಉರ್ವ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ಆಶ್ರಯದಲ್ಲಿ 2025ನೇ ಸಾಲಿನ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ ಮತ್ತು ವಾದ್ಯ ಪರಿಕರಗಳ ವಿತರಣೆ ಕಾರ್ಯಕ್ರಮ ನಡೆಯಿತು.

ಆರಂಭದಲ್ಲಿ ಅಭಿನಂದನಾ ನುಡಿಗಳನ್ನಾಡಿದ ಮಾಜಿ ಲಯನ್ಸ್ ಜಿಲ್ಲಾ ಗವರ್ನರ್ ಎಂ. ಬಿ. ಸದಾಶಿವ ಅವರು ಸಾಧಕರನ್ನು ಸನ್ಮಾನಿಸುವುದು ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಪ್ರತಿಪಾದಿಸಿ ಸನ್ಮಾನಿತರ ಸಾಧನೆಗಳನ್ನು ವಿಷದಪಡಿಸಿದರು.

ವಿವಿಧತೆಯಲ್ಲಿ ಏಕತೆ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸರಕಾರದ ಆರೋಗ್ಯ ಸಚಿವರು ಮತ್ತು ದ.ಕ. ಜಿಲ್ಲಾ ಆರೋಗ್ಯ ಸಚಿವರೂ ಆಗಿರುವ ಶ್ರೀ ದಿನೇಶ್ ಗುಂಡೂರಾವ್ ಅವರು ಅರೆಭಾಷೆಯಲ್ಲಿ ನಮಸ್ಕಾರ ಹೇಳಿ ಅರೆಭಾಷೆ ಜಾತಿಯನ್ನು ಮೀರಿ ಪ್ರಾದೇಶಿಕವಾಗಿ ಬೆಳೆದಿದೆ ಎಂದರು. ಇದು ವಿವಿಧತೆಯಲ್ಲಿ ಏಕತೆ ಇರುವುದಕ್ಕೆ ಸಾಕ್ಷಿಯಾಗಿದೆ ಎಂದ ಅವರು ನಾವಿಂದು ಭಾರತೀಯತೆಯನ್ನು ಜಾತಿ, ಧರ್ಮ, ಭಾಷೆಗಳನ್ನು ಮೀರಿ ಮೈಗೂಡಿಸಿಕೊಳ್ಳಬೇಕಿದೆ ಎಂದು ಪ್ರತಿಪಾದಿಸಿದರು. ಬಳಿಕ ಅವರು ತಲಾ ರೂ. 50,000 ನಗದು ಮತ್ತು ಪ್ರಶಸ್ತಿ ಫಲಕ, ಪ್ರಮಾಣ ಪತ್ರಗಳನ್ನೊಳಗೊಂಡ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿಗೆ ಭಾಜನರಾದ ಅರೆಭಾಷೆ ಸಂಶೋಧನೆ ಮತ್ತು ಸಾಹಿತ್ಯ ಕ್ಷೇತ್ರದ ಪುರಸ್ಕೃತ ಪುತ್ತೂರು ಅನಂತರಾಜು ಗೌಡ, ಅರೆಭಾಷಿಕರ ಸಂಘಟನೆ ಕ್ಷೇತ್ರದ
ಶ್ರೀಮತಿ ಲೋಕೇಶ್ವರಿ ವಿನಯಚಂದ್ರ ಮತ್ತು ಅರೆಭಾಷೆ ಸಾಹಿತ್ಯ ಕ್ಷೇತ್ರದ ಶ್ರೀಮತಿ ಕಟ್ರತನ ಲಲಿತಾ ಅಯ್ಯಣ್ಣ ಇವರಿಗೆ ಗೌರವ ಪ್ರಶಸ್ತಿ ಪ್ರದಾನ ಮಾಡಿದರು.

























































 
 

ನಿರಂತರ ಶ್ರಮ ಸಿಗುವುದೇ ಪ್ರಶಸ್ತಿ
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಶುಭ ಹಾರೈಸಿ ಮೂರು ಜನ ಸಾಧಕರು ನಿರಂತರವಾಗಿ ಪರಿಶ್ರಮವಹಿಸಿ ಸಮಾಜಪರ ಕಾರ್ಯ ಮಾಡಿದ್ದಾಕ್ಕಾಗಿಯೇ ಈ ಪ್ರಶಸ್ತಿ ಸಂದಿದೆ ಎಂದರು. ಭಾಷಾ ಅಕಾಡೆಮಿಗಳಿಂದಾಗಿ ಸಾಂಸ್ಕೃತಿಕ ಶ್ರೀಮಂತಿಕೆ ವೃದ್ಧಿಯಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ವಾದ್ಯ ಪರಿಕರಗಳ ವಿತರಣೆ
ಈ ಸಂದರ್ಭದಲ್ಲಿ ಮಡಿಕೇರಿ ಮತ್ತು ಮರ್ಕಂಜದ ತಂಡಗಳಿಗೆ ವಾದ್ಯ ಪರಿಕರಗಳನ್ನು ವಿತರಿಸಲಾಯಿತು.

ಸಭಾಧ್ಯಕ್ಷ ಸದಾನಂದ ಮಾವಜಿ ಪ್ರಸ್ತಾವನೆಗೈದು ಕೃತಿಕರ್ತರನ್ನು ಸನ್ಮಾನಿಸಿದರು.

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ. ಎ. ಗಫೂರ್, ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ. ಎಂ. ಶಾಹಿದ್, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶ್ರೀಮತಿ ಶಾಲೆಟ್ ಲವೀನಾ ಪಿಂಟೋ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಮಮತಾ ಡಿ. ಎಸ್. ಗಟ್ಟಿ, ಕರ್ನಾಟಕ ಗ್ಯಾರಂಟಿ ಅನುಷ್ಠಾನ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂಧ್ಲಾಜೆ, ಅಕಾಡೆಮಿ ಸದಸ್ಯ ಲೋಕಯ್ಯ ಗೌಡ ಕೆ., ಅಕಾಡೆಮಿ ಸದಸೈ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ಅವರು ಸಮಾರಂಭದಲ್ಲಿ ಬಿಡುಗಡೆಯಾದ 11 ಪುಸ್ತಕಗಳನ್ನು ಮತ್ತು ಕರ್ತೃಗಳನ್ನು ಪರಿಚಯಿಸಿದರು.

ಕಾರ್ಯಕ್ರಮಕ್ಕೆ ಮುಂಚಿತವಾಗಿ ನಡೆದ ಅರೆಭಾಷೆ ಸಂಗೀತ ಕಾರ್ಯಕ್ರಮವನ್ನು ಅಕಾಡೆಮಿ ಸದಸ್ಯ ಲೋಕೇಶ್ ಊರುಬೈಲು ನಿರ್ವಹಿಸಿದರು. ಗಾಯನದಲ್ಲಿ ಶ್ರೀಮತಿ ಕಾವ್ಯವಾಣಿ ಬಾಸುಮ ಕೊಡಗು, ಶಿವಪ್ರಸಾದ್ ಆಲೆಟ್ಟಿ ಸಹಕರಿಸಿದರು.

ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷೆ ಶ್ರೀಮತಿ ಸೌಮ್ಯಾ ಸುಕುಮಾರ್, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಯುವ ಘಟಕದ ಅಧ್ಯಕ್ಷ
ಕಿರಣ್ ಬಡ್ಲೆಗುತ್ತು, ಅಕಾಡೆಮಿ ರಿಜಿಸ್ಟ್ರಾರ್ ಚಿನ್ನಸ್ವಾಮಿ, ಅಕಾಡೆಮಿ ಸದಸ್ಯರುಗಳಾದ ಪಿ.ಎಸ್. ಕಾರ್ಯಪ್ಪ, ಡಾ. ಜ್ಞಾನೇಶ್ ನಿಡ್ಯಮಲೆ, ಶ್ರೀಮತಿ ಲತಾ ಪ್ರಸಾದ್ ಕುದುಪಾಜೆ, ಸೂದನ ಎಸ್. ಈರಪ್ಪ, ಪಿ. ಎಂ. ಸಂದೀಪ್, ಮೋಹನ್ ಪೊನ್ನಚ್ಚನ, ಗೋಪಾಲ್ ಪೆರಾಜೆ, ಕುದುಪಾಜೆ ಕೆ. ಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಡಾ. ಪುರುಷೋತ್ತಮ ಕರಂಗಲ್ಲು ಮತ್ತು ಸುಶ್ಮಿತಾ ಆದಿತ್ಯ ಚಿಧ್ಗಲ್ಲು ಮಾಡಿದರು. ಜಯಪ್ರಕಾಶ್ ಪೆರುಮುಂಡ ಆಶಯ ಗೀತೆ ಹಾಡಿದರು. ಚಂದ್ರಶೇಖರ ಪೇರಾಲು ಸ್ವಾಗತಿಸಿದರು.

error: Content is protected !!
Scroll to Top