ರಷ್ಯಾದಿಂದ ತೈಲ ಖರೀದಿಸಲು ಭಾರತದ ಬಳಿ ಅಮೆರಿಕ ಬೇಡಿಕೊಂಡಿತ್ತು

ಇರಾನ್‌ ವಿದೇಶಾಂಗ ಸಚಿವ ಬಹಿರಂಗಪಡಿಸಿದ ರಹಸ್ಯ

ಟೆಹ್ರಾನ್‌: ರಷ್ಯಾದಿಂದ ತೈಲ ಖರೀದಿಸುವಂತೆ ಭಾರತಕ್ಕೆ ಅಮೆರಿಕ ಅನುಮತಿ ನೀಡಿದ್ದಲ್ಲ ಬದಲಾಗಿ ಬೇಡಿಕೊಂಡದ್ದು ಎಂದು ಇರಾನ್‌ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಬಹಿರಂಗಪಡಿಸಿದ್ದಾರೆ. ಭಾರತವೂ ಸೇರಿದಂತೆ ವಿವಿಧ ದೇಶಗಳ ಬಳಿ ಈಗ ರಷ್ಯಾದಿಂದ ಕಚ್ಚಾತೈಲ ಖರೀದಿಸಲು ಬೇಡಿಕೊಳ್ಳುವ ಸ್ಥಿತಿಗೆ ಅಮೆರಿಕವನ್ನು ತಂದು ನಿಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.

ಮದ್ಯಪ್ರಾಚ್ಯ ಯುದ್ಧ ಶುರುವಾದ ಬಳಿಕ ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ ಅನುಮತಿ ನೀಡಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದು, ಭಾರತದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಲು ವಿಪಕ್ಷಗಳಿಗೆ ಅಸ್ತ್ರವಾಗಿ ಸಿಕ್ಕಿತ್ತು. ಟ್ರಂಪ್‌ ಎದುರು ಪ್ರಧಾನಿ ನರೇಂದ್ರ ಮೋದಿ ಮಂಡಿಯೂರಿದ್ದಾರೆ, ನಮ್ಮ ವಿದೇಶಾಂಗ ನೀತಿಯನ್ನು ಅಮೆರಿಕಕ್ಕೆ ಒತ್ತೆಯಿಡಲಾಗಿದೆ, ಭಾರತ ದುರ್ಬಲವಾಗಿದೆ ಎಂದೆಲ್ಲ ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳು ಸಂಸತ್ತಿನಿಂದ ಹಿಡಿದು ಹಾಬಿಬೀದಿಯಲ್ಲಿ ಟೀಕಿಸುತ್ತಿದ್ದವು. ಆದರೆ ಈಗ ಸ್ವತಹ ಇರಾನ್‌, ರಷ್ಯಾ ತೈಲ ಖರೀದಿಯ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದೆ.

























































 
 

ಎಕ್ಸ್‌ನಲ್ಲಿ ಸಂದೇಶ ಪೋಸ್ಟ್‌ ಮಾಡಿರುವ ಸಯ್ಯದ್ ಅಬ್ಬಾಸ್ ಅರಘ್ಚಿ, ರಷ್ಯಾದಿಂದ ಕಚ್ಚಾತೈಲ ಖರೀದಿಯನ್ನು ನಿಲ್ಲಿಸುವಂತೆ ಅಮೆರಿಕ ಒಂದು ತಿಂಗಳ ಕಾಲ ಬೆದರಿಸಿತ್ತು. ಈಗ ಇರಾನ್‌ ಜೊತೆಗಿನ ಎರಡು ವಾರಗಳ ಯುದ್ಧದ ನಂತರ ಭಾರತ ಸೇರಿದಂತೆ ಜಗತ್ತಿನ ಜೊತೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವಂತೆ ಭಾರತವನ್ನು ಬೇಡಿಕೊಳ್ಳುತ್ತಿದೆ ಎಂದು ಬರೆದಿದ್ದಾರೆ.

ಇರಾನ್‌ ಮೇಲೆ ನಡೆಯುತ್ತಿರುವ ಅಕ್ರಮ ಯುದ್ಧವನ್ನು ಯುರೋಪ್‌ ಬೆಂಬಲಿಸುವ ಮೂಲಕ ರಷ್ಯಾ ವಿರುದ್ಧದ ಹೋರಾಟದಲ್ಲಿ ಅಮೆರಿಕದ ಬೆಂಬಲ ಪಡೆಯುವ ನಿರೀಕ್ಷೆಯಲ್ಲಿದೆ. ಇದು ಶೋಚನೀಯ ಎಂದು ಸಿಟ್ಟು ಹೊರಹಾಕಿದ್ದಾರೆ.

ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದ ಮಾತುಕತೆ ಹಲವು ತಿಂಗಳಿನಿಂದ ನಡೆಯುತ್ತಾ ಬಂದಿದ್ದರೂ ಅಂತಿಮವಾಗಿರಲಿಲ್ಲ. ಭಾರತ ರಷ್ಯಾದಿಂದ ಕಚ್ಚಾತೈಲ ಖರೀದಿ ನಿಲ್ಲಿಸಬೇಕು ಎಂದು ಅಮೆರಿಕ ಷರತ್ತು ವಿಧಿಸಿತ್ತು. ಷರತ್ತು ವಿಧಿಸಿದ್ದರೂ ಭಾರತ ರಷ್ಯಾದಿಂದ ಕಚ್ಚಾತೈಲ ಖರೀದಿಯನ್ನು ನಿಲ್ಲಿಸಿರಲಿಲ್ಲ.

ಕಳೆದ ವಾರ ಅಮೆರಿಕ ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ಕಾಲ ಅನುಮತಿ ನೀಡಿರುವುದಾಗಿ ಹೇಳಿತ್ತು. ಈಗ ಕಚ್ಚಾತೈಲ ಬೆಲೆ ಭಾರಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಷ್ಯಾದಿಂದ ಯಾರೂ ಬೇಕಾದರೂ ಕಚ್ಚಾತೈಲವನ್ನು ಖರೀದಿಸಬಹುದು ಎಂದು ಅಮೆರಿಕ ಹೇಳಿದೆ.

error: Content is protected !!
Scroll to Top