ಪ್ರಧಾನಿ ಮೋದಿ ಅವರ ಗುಣಗಾನ ಮಾಡಿದ ನಟ ಮೋಹನ್ ಲಾಲ್

ಕೊಚ್ಚಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಲಯಾಳಂ ಚಿತ್ರರಂಗದ ಹೆಸರಾಂತ ಹಿರಿಯ ನಟ ಮೋಹನ್ ಲಾಲ್ ಅವರು ಶ್ಲಾಘಿಸಿದ್ದಾರೆ.

ಪಾಡ್‌ಕಾಸ್ಟ್ ಒಂದರಲ್ಲಿ ಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡಿದ ಲಾಲೇಟನ್, ಪ್ರಧಾನಿ ಮೋದಿ ಅವರು ರಾಜಕೀಯ ಚಾಣಾಕ್ಷ, ಕಲಾವಿದರಿಗೆ ಗೌರವ ನೀಡುವ ದೂರದೃಷ್ಟಿತ್ವ ಹೊಂದಿರುವ ನಾಯಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಅವರನ್ನು ನಾನು ಸಾಕಷ್ಟು ಬಾರಿ ಭೇಟಿ ಮಾಡಿದ್ದೇನೆ. ಪ್ರತಿ ಭೇಟಿಯಲ್ಲಿಯೂ ಓರ್ವ ದೂರದೃಷ್ಟಿಯ ದೃಢ ನಾಯಕನನ್ನು ಭೇಟಿಯಾದ ಅನುಭವವೇ ನನಗೆ ದೊರೆತಿದೆ. ಅವರು ದೇಶಕ್ಕಾಗಿ ತಮ್ಮನ್ನು ತಾವು ಮುಡಿಪಾಗಿಟ್ಟಿರುವುದು ನಿಜಕ್ಕೂ ಸ್ಪೂರ್ತಿದಾಯಕ. ದೇಶವನ್ನು ಮುನ್ನಡೆಸುವ ಅವರ ನಾಯಕತ್ವ ಸ್ಪೂರ್ತಿದಾಯಕ ಎಂದು ಗುಣಗಾನ‌ ಮಾಡಿದ್ದಾರೆ.























































 
 

error: Content is protected !!
Scroll to Top