ಕಾಲು ಕಟ್ ಆಗಿ ಕೋಮಾ ಸ್ಥಿತಿಯಲ್ಲಿದ್ದಾರೆ ಎಂದ ವರದಿಗಳು
ಟೆಹ್ರಾನ್: ಇರಾನ್‌ನ ನೂತನ ಪರಮೋಚ್ಚ ನಾಯಕ ಮೊಜ್ತಬ ಖಮೇನಿ ಯುದ್ಧದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಅವರ ಒಂದು ಕಾಲು ತುಂಡಾಗಿದೆ ಹಾಗೂ ಈಗ ಕೋಮಾ ಸ್ಥಿತಿಯಲ್ಲಿ ಇದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಯಾತೊಲ್ಲಾ ಖಮೇನಿ ಇಸ್ರೇಲ್ ದಾಳಿಯಲ್ಲಿ ಸಾವಿಗೀಡಾದ ಬಳಿಕ ಮೊಜ್ತಾಬ ಖಮೇನಿ ಇರಾನ್‌ನ ಸರ್ವೋಚ್ಚ ನಾಯಕನಾಗಿ ಆಯ್ಕೆಯಾಗಿದ್ದರು. ಇದರ ಬೆನ್ನಿಗೆ ಇಸ್ರೇಲ್ ಮೊಜ್ತಬ ಖಮೇನಿಯನ್ನು ಗುರಿ ಮಾಡಿಕೊಂಡು ದಾಳಿ ನಡೆಸಿದೆ ಎಂದು ದ ಸನ್ ಪತ್ರಿಕೆ ವರದಿ ಮಾಡಿದೆ.
ದಾಳಿಯಲ್ಲಿ ಮೊಜ್ತಬ ಖಮೇನಿ ಒಂದು ಕಾಲನ್ನು ಕಳೆದುಕೊಂಡಿದ್ದಾರೆ ಹಾಗೂ ಅವರ ಹೊಟ್ಟೆಯ ಭಾಗಕ್ಕೆ ಗಂಭೀರವಾದ ಗಾಯವಾಗಿದೆ. ಲಿವರ್ ವಿಫಲಗೊಂಡು ಅವರು ಕೋಮಾ ಸ್ಥಿಯಲ್ಲಿದ್ದಾರೆ ಎಂದು ಸನ್ ಪತ್ರಿಕೆಯ ವರದಿ ತಿಳಿಸಿದೆ.
ಟೆಹ್ರಾನ್‌ನ ಸಿನಾ ಮೆಡಿಕಲ್ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ಮೊಜ್ತಬ ಖಮೇನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಆಸ್ಪತ್ರೆಗೆ ಭಾರಿ ಭದ್ರತೆ ಕಲ್ಪಿಸಲಾಗಿದೆ. 56 ವರ್ಷದ ಖಮೇನಿಯ ಒಂದು ಕಾಲನ್ನು ಕತ್ತರಿಸಿ ತೆಗೆಯಲಾಗಿದೆ. ಇನ್ನೊಂದು ಕಾಲಿಗೂ ಗಂಭೀರವಾದ ಏಟು ಬಿದ್ದಿದೆ. ಚಿಕಿತ್ಸೆಗೆ ದಾಖಲಾಗಿರುವ ಆಸ್ಪತ್ರೆಗೆ ದಿಗ್ಭಂದನ ಹಾಕಲಾಗಿದೆ. ಅಲ್ಲಿನ ವೈದ್ಯರಿಗೂ ಹೊರಗೆ ಹೋಗಲು ಅನುಮತಿಯಿಲ್ಲ ಎಂದು ವರದಿ ತಿಳಿಸಿದೆ.
ನಿನ್ನೆ ಮೊಜ್ತಬ ಖಮೇನಿ ಜಗತ್ತಿಗೆ ನೀಡಿದ ಎಚ್ಚರಿಕೆಯ ಸಂದೇಶವನ್ನು ಬೇರೊಬ್ಬರು ಓದಿ ಹೇಳಿದಾಗಲೇ ಖಮೇನಿ ಗಾಯಗೊಂಡಿರುವ ಊಹಾಪೋಹಗಳು ದಟ್ಟವಾಗಿದ್ದವು. ಈ ಸಂದೇಶವನ್ನು ನ್ಯೂಸ್ ಆಂಕರ್ ಓದಿ ಹೇಳಿದ್ದರು. ಇಂಥ ಗಂಭೀರ ಸಂದೇಶವನ್ನು ಸ್ವತಹ ನಾಯಕನೇ ಹೇಳಬೇಕಿತ್ತು.

























