ಹಿಂಸಾತ್ಮಕ ರೀತಿಯಲ್ಲಿ ಅಕ್ರಮವಾಗಿ ಹೋರಿಗಳ ಸಾಗಾಟ: ಆರೋಪಿ ಬಂಧನ

ನೆಲ್ಯಾಡಿ: ಹಿಂಸಾತ್ಮಕ ರೀತಿಯಲ್ಲಿ ಹೋರಿಗಳನ್ನು ‌ಸಾಗಾಟ ಮಾಡುತ್ತಿದ್ದ ಗೂಡ್ಸ್ ಟೆಂಪೋ ಒಂದನ್ನು ಗುಂಡ್ಯದಲ್ಲಿ ‌ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು ಹಾಸನದ ಅರಸೀಕೆರೆಯ ಕುಮಾರ್ (48) ಎಂದು ಗುರುತಿಸಲಾಗಿದೆ.

ಗುಂಡ್ಯ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ಸಮಯದಲ್ಲಿ ಟೆಂಪೋದಲ್ಲಿ ಹೋರಿಗಳ ಸಾಗಾಟ ನಡೆಯುತ್ತಿರುವುದು ಪತ್ತೆಯಾಗಿದೆ. ಆರೋಪಿಯನ್ನು ಪ್ರಶ್ನೆ ಮಾಡಲಾಗಿ ಹೋರಿಗಳನ್ನು ಮಾಂಸ ಮಾಡುವ ಉದ್ದೇಶದಿಂದ ಕಾಸರಗೋಡಿಗೆ ಸಾಗಾಟ‌ ಮಾಡುತ್ತಿರುವುದಾಗಿ ಹೇಳಿದ್ದಾನೆ. ಹಾಗೆಯೇ ಇದನ್ನು ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ನಡೆಸಲಾಗುತ್ತಿದೆ ಎನ್ನುವ ವಿಷಯವೂ ಇದೇ ವೇಳೆ ಬಯಲಾಗಿದೆ.























































 
 

ಟೆಂಪೋದಲ್ಲಿ ಹಿಂಸಾತ್ಮಕ ರೀತಿಯಲ್ಲಿ ನಾಲ್ಕು ಹೋರಿಗಳನ್ನು ‌ತುಂಬಲಾಗಿತ್ತು. ಈ ಹೋರಿಗಳ ಮೌಲ್ಯ ಸುಮಾರು 2 ಲಕ್ಷ ರೂ. ಮತ್ತು ಟೆಂಪೋ ಮೌಲ್ಯ ಸುಮಾರು 8 ಲಕ್ಷ ರೂ. ಆಗಿದ್ದು, ಅವುಗಳೆಲ್ಲವೂ ಸದ್ಯ ಪೊಲೀಸ್ ವಶದಲ್ಲಿವೆ.

error: Content is protected !!
Scroll to Top