ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಹತ್ಯೆಗೆ ಯತ್ನ

ಮದುವೆ ಸಮಾರಂಭದಲ್ಲಿ ಗುಂಡಿನೇಟಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಫಾರೂಕ್‌ ಅಬ್ದುಲ್ಲಾ

ಶ್ರೀನಗರ : ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ತಂದೆ, ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರನ್ನು ಗುಂಡಿಕ್ಕಿ ಸಾಯಿಸಲು ಯತ್ನಿಸಿರುವ ಘಟನೆ ನಡೆದಿದೆ. ಬುಧವಾರರಂದು ಸಂಜೆ ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಫಾರೂಕ್ ಅಬ್ದುಲ್ಲಾ ಅವರನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು. ದುಷ್ಕರ್ಮಿಯೊಬ್ಬ ಅವರ ಮೇಲೆ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ದಾಳಿಕೋರ ಅಬ್ದುಲ್ಲಾ ಅವರಿಂದ ಕೆಲವೇ ಕೆಲವು ಹೆಜ್ಜೆಗಳ ಅಂತರದಲ್ಲಿದ್ದ. ಆದರೆ ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಡಿಜಿ) ಕಮಾಂಡೋಗಳು ಅವನನ್ನು ತಳ್ಳಿದ್ದಾರೆ. ಗುಂಡು ಗುರಿ ತಪ್ಪಿತ್ತು, ಅಬ್ದುಲ್ಲಾ ಕೂದಲೆಳೆಯ ಅಂತರದಲ್ಲಿ ಪಾರಾದರು. ದಾಳಿಕೋರನನ್ನು ಕಮಲ್ ಸಿಂಗ್ ಜಮ್ವಾಲ್ ಎಂದು ಗುರುತಿಸಲಾಗಿದ್ದು, ಆತನನ್ನು ತಕ್ಷಣವೇ ವಶಕ್ಕೆ ಪಡೆಯಲಾಗಿದೆ.























































 
 

ಆತನನ್ನು ಹಿಡಿದ ಕೂಡಲೇ ಜನರು ಆತನನ್ನು ಥಳಿಸುತ್ತಿರುವುದನ್ನು ವೀಡಿಯೊಗಳು ತೋರಿಸಿವೆ. ದಾಳಿಕೋರ ಕುರ್ಚಿಯ ಮೇಲೆ ಕುಳಿತು, ತಾನು ಜಮ್ಮುವಿನ ಪುರಾಣಸ್ ಮಂಡಿಯ ನಿವಾಸಿ ಎಂದು ಪೊಲೀಸರಿಗೆ ಹೇಳುತ್ತಿರುವುದು ಕೇಳಿಸುತ್ತಿದೆ. 20 ವರ್ಷಗಳಿಂದ ಫಾರೂಕ್‌ ಅಬ್ದುಲ್ಲಾ ಅವರನ್ನು ಸಾಯಿಸಲು ಯತ್ನಿಸುತ್ತಿದೆ. ಇಂದು ಕಾಲ ಕೂಡಿ ಬಂದಿತ್ತು ಎಂದು ಆರೋಪಿ ಯಾವುದೇ ಅಂಜಿಕೆಯಿಲ್ಲದೆ ಹೇಳಿಕೋಮಡಿದ್ದಾನೆ. ಈತ ಮದ್ಯದ ಅಮಲಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!
Scroll to Top