ಬಾಗಲಕೋಟೆ: ಯುವತಿಯೊಬ್ಬಳ ವಿಷಯದಲ್ಲಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ.
ಅಪ್ರಾಪ್ತ ಯುವಕ ಆರೋಪಿಯಾಗಿದ್ದು, ರಾಹುಲ್ ಎಂಬಾತನೇ ಕೊಲೆಯಾದ ದುರ್ದೈವಿ.
ಯುವತಿಯ ವಿಷಯಕ್ಕೆ ಸಂಬಂಧಿಸಿದ ಹಾಗೆ ರಾಹುಲ್ ಮತ್ತು ಅಪ್ರಾಪ್ತ ಯುವಕನ ನಡುವೆ ಹೋಳಿ ಹಬ್ಬದ ಸಂದರ್ಭದಲ್ಲಿ ಗಲಾಟೆ ನಡೆದಿದೆ. ಈ ವೇಳೆ ಯುವಕ ರಾಹುಲ್‌ನ ಕುತ್ತಿಗೆಗೆ ಬೈಕ್‌ನ ಕೀ ಚೈನ್‌ನಿಂದ ಚುಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡ ರಾಹುಲ್ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ.
ತೇರದಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
























