ಪವರ್ ಶೇರಿಂಗ್ ಗುದ್ದಾಟದ ಹಿನ್ನೆಲೆಯಲ್ಲಿ ಕುತೂಹಲ ಮೂಡಿಸಿದ್ದ ಭೋಜನಕೂಟ
ಬೆಂಗಳೂರು: ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ತುಂಬಿದ ಪ್ರಯುಕ್ತ ಮಂಗಳವಾರ ರಾತ್ರಿ ಏರ್ಪಡಿಸಿದ್ದ ಡಿನ್ನರ್ ಪಾರ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಪಕ್ಷದ ಘಟಾನುಘಟಿ ನಾಯಕರು ಭಾಗಿಯಾಗಿದ್ದರು.
ರಾಜಕೀಯ ಲೆಕ್ಕಾಚಾರ, ಪವರ್ ಶೇರಿಂಗ್ ಗುದ್ದಾಟದ ಹಿನ್ನೆಲೆಯಲ್ಲಿ ಕುತೂಹಲ ಮೂಡಿಸಿದ್ದ ಈ ಭೋಜನಕೂಟ ಸುಸೂತ್ರವಾಗಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರು ಹಾಗೂ ಶಾಸಕರು ಇಂದಿನ ಭೋಜನ ಕೂಟದಲ್ಲಿ ಭಾಗಿಯಾಗಿದ್ದರು. ಇತ್ತೀಚೆಗಷ್ಟೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟು ಕೊಡುವ ಬಗ್ಗೆ ಡಿಕೆಶಿ ಸುಳಿವು ಕೊಟ್ಟಿದ್ದರು. ಬಿಜೆಪಿ ಶಾಸಕರಾದ ಎಸ್ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಡಿನ್ನರ್ ಪಾರ್ಟಿಗೆ ಹಾಜರಾಸಸದಸು ಗಮನ ಸೆಳೆಯಿತು.
ದಿನೇಶ್ ಗೂಳಿಗೌಡ, ಟಿ.ಬಿ ಜಯಚಂದ್ರ, ಕುಣಿಗಲ್ ರಂಗನಾಥ್, ಪ್ರಿಯಾಂಕ್ ಖರ್ಗೆ, ಡಿ.ಸುಧಾಕರ್, ಶರತ್ ಬಚ್ಚೇಗೌಡ, ಬಸಂತಪ್ಪ, ಎಂ.ಕೃಷ್ಣಪ್ಪ, ಕೆ.ಎಚ್.ಮುನಿಯಪ್ಪ, ಎ.ಸಿ ಶ್ರೀನಿವಾಸ್, ಪುಟ್ಟರಂಗಶೆಟ್ಟಿ, ಮಾಗಡಿ ಬಾಲಕೃಷ್ಣ, ಬಿ.ನಾಗೇಂದ್ರ, ಜಿ.ಟಿ ಪಾಟೀಲ್, ಯು.ಬಿ ಬಣಕಾರ್, ಚನ್ನರಾಜ್ ಹಟ್ಟಿಹೊಳಿ, ಸುನೀಲ್ ಕುಮಾರ್, ಚಂದ್ರಶೇಖರ ಪಾಟೀಲ್, ಎಸ್.ಎಸ್ ಮಲ್ಲಿಕಾರ್ಜುನ, ಪುಟ್ಟಸ್ವಾಮಿ ಗೌಡ, ಮಂಜುನಾಥ್ ಭಂಡಾರಿ, ಅಶೋಕ್ ರೈ, ಎ.ಆರ್ ಕೃಷ್ಣಮೂರ್ತಿ, ಎನ್.ಎಸ್ ಭೋಸರಾಜು, ಬೇಳೂರು ಗೋಪಾಲಕೃಷ್ಣ, ಜಗದೇವ್ ಗುತ್ತೇದಾರ್, ಮಧು ಬಂಗಾರಪ್ಪ ಮತ್ತಿತರರು ಡಿನ್ನರ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.
ಸಿಎಂ ಸಿದ್ದರಾಮಯ್ಯ ಜೊತೆ ಡಿನ್ನರ್ ಪಾರ್ಟಿಗೆ ರಾಜಣ್ಣ ಆಗಮಿಸಿದ್ದರು. ಸಚಿವರಾದ ಈಶ್ವರ ಖಂಡ್ರೆ, ಚಲುವರಾಯಸ್ವಾಮಿ, ಜಿ.ಪರಮೇಶ್ವರ್, ಕೃಷ್ಣ ಬೈರೇಗೌಡ, ಸತೀಶ್ ಜಾರಕಿಹೊಳಿ ಕೂಡ ಆಗಮಿಸಿದ್ದರು.
























