ಬೆಂಗಳೂರು: ಇಸ್ರೇಲ್ – ಇರಾನ್ನ ನಡುವಿನ ಯುದ್ಧದ ತೀವ್ರತೆಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಮಧ್ಯಪ್ರಾಚ್ಯ ರಾಷ್ಟ್ರಗಳ ಕಡೆಗೆ ತೆರಳಬೇಕಿದ್ದ ವಿಮಾನಗಳು ರದ್ದಾಗಿವೆ.
ಅಬುದಾಬಿ, ರಿಯಾದ್, ಜೆದ್ದಾ, ದಮ್ಮಾಮ್, ದುಬೈ, ದೋಹಾಗಳಿಂದ ಬೆಂಗಳೂರಿಗೆ ಬರಬೇಕಾಗಿದ್ದ ಎಂಟು ವಿಮಾನಗಳು ಮತ್ತು ಬೆಂಗಳೂರಿನಿಂದ ಹೊರಡಬೇಕಾಗಿದ್ದ ಒಂಬತ್ತು ವಿಮಾನಗಳು ರದ್ದಾಗಿವೆ. ಭದ್ರತಾ ಕಾರಣಗಳು ಮತ್ತು ಏರ್ಸ್ಪೇಸ್ ನಿರ್ಬಂಧದ ಕಾರಣಕ್ಕಾಗಿ ಈ ವಿಮಾನಗಳನ್ನು ರದ್ದು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಪ್ರಯಾಣಿಕರು ತಮ್ಮ ವಿಮಾನ ಪ್ರಯಾಣದ ವೇಳಾಪಟ್ಟಿಯನ್ನು ಪರಿಶೀಲನೆ ಮಾಡುವಂತೆಯೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
























