ಜಾತಿಗೆ ಬೆಲೆ ನಮ್ಮ ದೇಶದಲ್ಲಿ ಇರಲಿಲ್ಲ ಎನ್ನುವುದು ಇತಿಹಾಸ ಓದಿದರೆ ತಿಳಿಯುತ್ತದೆ: ಅನಂತ ಕುಮಾರ್ ಹೆಗಡೆ

ಭಟ್ಕಳ: ಭಾರತದಲ್ಲಿ ಜಾತಿಗೆ ಎಂದೂ ಬೆಲೆ ಇರಲಿಲ್ಲ. ಯೋಗ್ಯತೆಗೆ ಬೆಲೆ ಇತ್ತು. ನಮ್ಮಂತಹ ಬುದ್ಧಿವಂತರು ಜಾತಿಗೆ ಪ್ರಾಶಸ್ತ್ಯ ನೀಡಿದ್ದು. ನಮ್ಮ ಹಿಂದಿನ ಕಾಲದ ಸತ್ಯ ಏನು ಎನ್ನುವುದು ಇತಿಹಾಸ ಓದಿದರೆ ಅರಿವಾಗುತ್ತದೆ ಎಂದು ಮಾಜಿ ಸಂಸದ ಅನಂತ ಕುಮಾರ್ ಹೆಗಡೆ ತಿಳಿಸಿದ್ದಾರೆ.

ಅವರು ಭಟ್ಕಳದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ್ದು, ಇತಿಹಾಸದಲ್ಲಿ ಆಗಿ ಹೋದ 90% ಗಳಷ್ಟು ಋಷಿಗಳು ಬ್ರಾಹ್ಮಣರಲ್ಲ. ವಾಲ್ಮೀಕಿ, ವಿಶ್ವಾಮಿತ್ರರೂ ಬ್ರಾಹ್ಮಣರಲ್ಲ. ಜಾತ್ಯಾತೀತತೆ ಎಂದರೆ ಅದು ಹಿಂದುತ್ವ. ನಾವು ಬೇರೆ ದೇಶಗಳಿಂದ ಭಾರತಕ್ಕೆ ಬಂದವರಿಗೆ ಇಲ್ಲಿ ಪ್ರಾರ್ಥನಾಲಯಗಳನ್ನು ಕಟ್ಟಲು ಅವಕಾಶ ನೀಡಿದ್ದೇವೆ. ನಮಗಿಂತ ದೊಡ್ಡ ಜಾತ್ಯಾತೀತರು ಇದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಜಾತ್ಯಾತೀತತೆಯ ಬಗ್ಗೆ ಭಾಷಣ ಬಿಗಿಯುವವರಿಗೆ ತಾಕತ್ತಿದ್ದರೆ ಬಾಂಗ್ಲಾದೇಶಕ್ಕೆ ಹೋಗಿ ಅದರ ಬಗ್ಗೆ ಭಾಷಣ ಮಾಡಲಿ. ನಮ್ಮನ್ನು ಸೋಲಿಸಿದ್ದು ಕ್ರೈಸ್ತರು, ಮುಸ್ಲಿಮರಲ್ಲ. ಬದಲಾಗಿ ಹಿಂದೂಗಳೇ ಆದ ಜಯ ಚಂದ, ಮಲ್ಲಪ್ಪ ಶೆಟ್ಟಿಯಂತಹ ಜನಗಳು. ನಾವು ಒಗ್ಗಟ್ಟಾಗದೇ ಹೋದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ನುಡಿದಿದ್ದಾರೆ.





















































 
 

RSS ಮುಗಿಸಲು ಹೊರಟವರು ಭ್ರಮೆಯಲ್ಲಿ ಬದುಕುತ್ತಿದ್ದಾರೆ. ಹುಲಿ ಸಿಂಹವನ್ನು ಯಾರೂ ಬಲಿ ನೀಡಲು ಬಳಕೆ ಮಾಡುವುದಿಲ್ಲ. ಕುರಿಯನ್ನು ಬಲಿ ಕೊಡುತ್ತಾರೆ. ಹಾಗೆಯೇ ನಮ್ಮ ಸಂಘವನ್ನು ನಿಲ್ಲಿಸಲು ಯಾರಿಂದಲೂ ‌ಸಾಧ್ಯವಿಲ್ಲ. ನಮಗೆ ಅಪಾಯ ನಮ್ಮೊಳಗಿನವರಿಂದಲೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮಗಿಂತ ಚಂದವಾಗಿ ದಕ್ಷಿಣ ಆಫ್ರಿಕಾದಲ್ಲಿ ಗಣೇಶೋತ್ಸವದ ಆಚರಣೆ ನಡೆಯುತ್ತದೆ. ಚೀನಾದ ಗ್ರಾಮೀಣ ಪ್ರದೇಶಗಳಲ್ಲಿ ಭಾರತೀಯರಿಗೆ ಅಪಾರ ಗೌರವವಿದೆ. ಜಗತ್ತು ನಮ್ಮತ್ತ ನೋಡುತ್ತಿದೆ, ನಾವಿಂದು ಎದ್ದು ನಿಲ್ಲಬೇಕಿದೆ ಎಂದು ಜನರನ್ನು ಅನಂತ ಕುಮಾರ್ ಹೆಗಡೆ ಒತ್ತಾಯಿಸಿದ್ದಾರೆ. ನಮ್ಮ ಯಾವುದೇ ಧರ್ಮಗ್ರಂಥಗಳಲ್ಲಿ ಜಾತಿ ವ್ಯವಸ್ಥೆಯ ಉಲ್ಲೇಖವಿಲ್ಲ. ನದಿ ಹರಿಯುವಾಗ ಕೊಳಕು ಸೇರಿಕೊಂಡಂತೆ, ಕಾಲಕ್ರಮೇಣ ಜಾತಿ ಎಂಬ ಕೊಳಕು ನಮ್ಮಲ್ಲಿ ಸೇರಿಕೊಂಡಿದೆ. ಅದನ್ನು ಸ್ವಚ್ಛಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಪ್ರಸ್ತುತ ಕಾಲಘಟ್ಟದಲ್ಲಿ ಕೇವಲ ತಮ್ಮ ಜಾತಿಯವರನ್ನು ಮಾತ್ರ ಗೌರವಿಸುವ ‘ಜಾತಿ ಸಮ್ಮೇಳನಗಳು’ ಫ್ಯಾಶನ್ ಆಗಿರುವುದು ಸಮಾಜದ ಏಕತೆಗೆ ಕಪ್ಪು ಚುಕ್ಕೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

error: Content is protected !!
Scroll to Top