ಬೆಳ್ತಂಗಡಿ: ತಾಲೂಕಿನ ಕೊರಿಂಜ ಸಮುದಾಯ ಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಗುರುವಾಯನಕೆರೆ ಇದರ ನೇತ್ರತ್ವದಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ದಡಿಯ ಕೊರಿಂಜ ದೇವಸ್ಥಾನ ಮತ್ತು ಭಜನಾ ಮಂಡಳಿಯ ಜಂಟಿ ಯಲ್ಲಿ ಕೊರಿಂಜ ಸಮುದಾಯ ಭವನದಲ್ಲಿ ನಡೆಯಿತು.
ಉದ್ಘಾಟನೆಯನ್ನು ಕೊರಿಂಜ ದೇವಸ್ಥಾನದ ಆಡಳಿತ ಮೊಕ್ತೇಸರ ಯೋಗೀಶ್ ಅವರು ನೆರವೇರಿಸಿದರು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಯೋಜನೆಯ ತಾಲೂಕು ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸುಗುಣ ಶೆಟ್ಟಿ ಅವರು ಪ್ರಾಸ್ಥಾವಿಕ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ. ಸಹನಾ ಕೆ. (ಚೀಫ್ ಆಫೀಸರ್) ಇವರು ಅರೋಗ್ಯದ ಬಗ್ಗೆ ಮಾಹಿತಿ ನೀಡಿ, ಆರೋಗ್ಯವೇ ಭಾಗ್ಯ. ನಾವು ಆರೋಗ್ಯವಾಗಿದ್ದರೆ ನೆಮ್ಮದಿಯ ಜೀವನ ನಡೆಸಬಹುದು. ಇಂತಹ ಗ್ರಾಮೀಣ ಮಟ್ಟದಲ್ಲಿ ನಡೆಸುವ ಉಚಿತ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಇದರ ಪ್ರಯೋಜನ ಪಡೆಯಬೇಕು ಎಂದು ಶುಭ ಹಾರೈಸಿದರು.
ಸೇವಾಪ್ರತಿನಿಧಿ ಸೀತಾ ರಾಮ ಸ್ವಾಗತಿಸಿದರು. ಜ್ಞಾನ ವಿಕಾಸ ಸಂಯೋಜಕಿ ಜಾಲಜಾಕ್ಷಿ ಧನ್ಯವಾದವಿತ್ತರು.
























