ಅಹಮದಾಬಾದ್: ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 96 ರನ್ಗಳ ಬೃಹತ್ ಅಂತರದಿಂದ ಸೋಲಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡ ಮೊದಲು ಬ್ಯಾಟಿಂಗ್ ಮಾಡಿ 255 ರನ್ಗಳ ಬೃಹತ್ ಮೊತ್ತವನ್ನು ಗಳಿಸಿತು. ಆ ಬಳಿಕ ಗುರಿ ಹಿಂಬಾಲಿಸಿದ ಮಿಚೆಲ್ ಸ್ಯಾಂಟ್ನರ್ ನೇತೃತ್ವದ ನ್ಯೂಜಿಲೆಂಡ್ ತಂಡವನ್ನು ಕೇವಲ 159 ರನ್ಗಳಿಗೆ ಆಲೌಟ್ ಮಾಡಿತು.
ಇಡೀ ದೇಶ ಟೀಂ ಇಂಡಿಯಾದ ಈ ಗೆಲುವನ್ನು ಸಂಭ್ರಮಿಸುತ್ತಿದೆ. ಎಲ್ಲೆಡೆ ಸೂರ್ಯಕುಮಾರ್ ಯಾದವ್ ಪಡೆಯ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಧಾನಿ ಮೋದಿ ಸಹಿತ ಅನೇಕ ಗಣದ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಭಾರತ ಪಂದ್ಯ ಗೆಲ್ಲುತ್ತಿದ್ದಂತೆಯೇ ತಂಡದ ಸದಸ್ಯರ ಸಂತೋಷ ಉಕ್ಕಿ ಹಿರಿಸಯಿತು. ಸ್ಟೇಡಿಯಂನಲ್ಲಿದ್ದ ಸಾವಿರಾರು ಕ್ರಿಕೆಟ್ ಅಭಿಮಾನಗಳ ಜೊತೆಗೆ ಟೀಂ ಇಂಡಿಯಾ ಸದಸ್ಯರೂ ಕುಣಿದು ಕುಪ್ಪಳಿಸಿದರು. ಟೀಂ ಇಂಡಿಯಾದ ಖುಷಿಯ ಫೋಟೊ ಆಲ್ಬಂ ಇಲ್ಲಿದೆ.


































