ಗುಡ್ಡದ ಮೇಲಿಂದ ಹಾರಿ ಯುವಕ ಆತ್ಮಹತ್ಯೆ

ಯಲ್ಲಾಪುರ: ಜೇನುಕಲ್ಲು ಗುಡ್ಡದ ಮೇಲಿಂದ ಹಾರಿ ಧಾರವಾಡದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಮೃತನನ್ನು ಹೊಸಯಲ್ಲಾಪುರದ ನಿವಾಸಿ ಶ್ರೀನಿಧಿ ಕಡಕೋಳ(23) ಎಂದು ಗುರುತಿಸಲಾಗಿದೆ. ಶ್ರೀನಿಧಿ ಅವರು ತಾವು ಸ್ಕೂಟಿಯಲ್ಲಿ ಗೋಕರ್ಣಕ್ಕೆ ಹೋಗುವುದಾಗಿ ಹೇಳಿ ಬಂದಿದ್ದರು.

ಈ ಸಂಬಂಧ ಮೃತರ ತಂದೆ ಕೃಷ್ಣ ಕಡಕೋಳ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ನಮ್ಮ ಮಗ ಯಾವುದೋ ವಿಚಾರವನ್ನು ಗಂಭೀರವಾಗಿ ಮನಸ್ಸಿಗೆ ಹಚ್ಚಿಕೊಂಡಿದ್ದ. ಅವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಲ್ಲಿ ನಮಗೆ ಯಾವ ಸಂಶಯ ಸಹ ಇಲ್ಲ ಎಂದಿದ್ದಾರೆ.





















































 
 

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶವವನ್ನು ಮೇಲಕ್ಕೆತ್ತುವ ಕಾರ್ಯ ಮಾಡಿದ್ದಾರೆ.

error: Content is protected !!
Scroll to Top