ಬೆಂಗಳೂರು: ಕಾಲು ತಾಗಿತು ಎಂಬ ವಿಷಯಕ್ಕೆ ಆರಂಭವಾದ ಕಲಹ ಕೊಲೆಯಲ್ಲಿ ಅಂತ್ಯವಾದ ಘಟನೆ ಶಿವನಹಳ್ಳಿಯಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಶಶಿಕುಮಾರ್ ಎಂದು ತಿಳಿದು ಬಂದಿದೆ. ಆರೋಪಿಗಳನ್ನು ಮಂಜುನಾಥ ಮತ್ತು ಭಾಗ್ಯರಾಜ್ ಎಂದು ಗುರುತಿಸಲಾಗಿದೆ.
ಶಿವನಹಳ್ಳಿಯ ಹೊಟೇಲ್ ಒಂದರಲ್ಲಿ ಶಶಿಕುಮಾರ್ ತಿಂಡಿ ತಿನ್ನುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಮಂಜುನಾಥನ ಕಾಲನ್ನು ಶಶಿಕುಮಾರ್ ತುಳಿದಿದ್ದಾರೆ. ಈ ಕ್ಷುಲ್ಲಕ ವಿಷಯಕ್ಕೆ ಜಗಳ ಆರಂಭವಾಗಿದೆ. ಇದೇ ಸಮಯದಲ್ಲಿ ಮಂಜುನಾಥ ತನ್ನ ಸಹೋದರ ಭಾಗ್ಯರಾಜ್‌ನನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾನೆ.
ಜಗಳ ತಾರಕಕ್ಕೇರಿ ಭಾಗ್ಯ ರಾಜ್ ಶಶಿಕುಮಾರ್ ಅವರ ಕತ್ತಿಗೆ ಚಾಕು ಚುಚ್ಚಿ ಹತ್ಯೆ ಮಾಡಿರುವುದಾಗಿದೆ.
ಬಸವೇಶ್ವರ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪರಾರಿಯಾಗಿದ್ದ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
























