ಬುರ್ಖಾ ಹಾಕಿ ಹೋಳಿ ಹಬ್ಬ ಆಚರಿಸಿದ ಯುವಕರು ಪೊಲೀಸರ ವಶಕ್ಕೆ

ಕಲಬುರ್ಗಿ: ಹೋಳಿ ಹಬ್ಬವನ್ನು ತಮ್ಮ ಗೆಳೆಯನಿಗೆ ಬುರ್ಖಾ ಧರಿಸಿ ಆಚರಿಸಿದ ಯುವಕರ ವಿರುದ್ಧ ಮುಸ್ಲಿಂ ಸಮುದಾಯ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಹೋಳಿ ಆಡುವ ವೇಳೆ ಗೆಳೆಯನೊಬ್ಬನಿಗೆ ಹಿಜಾಬ್, ಬುರ್ಖಾ ಹಾಕಿಸಿ ವಿವಿಧ ಭಂಗಿಯಲ್ಲಿ ನೃತ್ಯ ಮಾಡಿಸಿ, ಫೋಟೋ ತೆಗೆಸಿ, ವಿಡಿಯೋ ಮಾಡಿಸಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಹಾಗೆಯೇ ಬುರ್ಖಾ ಧರಿಸಿದ ಯುವಕನನ್ನು ಗರ್ಭಿಣಿಯಂತೆ ನಟನೆ ಮಾಡಿಸಿ ಫೋಟೋ ತೆಗೆದು ಹಾಕಿದ್ದರು. ಇವೆಲ್ಲವೂ ಮುಸ್ಲಿಂ ಸಮುದಾಯದವರ ಆಕ್ರೋಶಕ್ಕೆ ಕಾರಣವಾಗಿದೆ.

ತಮ್ಮ ಭಾವನೆಗಳಿಗೆ ಧಕ್ಕೆ ಮಾಡಿರುವ ಯುವಕರ ವಿರುದ್ಧ ನಿಂಬರ್ಗಾ ಪೊಲೀಸರಿಗೆ ದೂರು ನೀಡಿದ್ದು, ತಕ್ಷಣವೇ ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಿದ್ದಾರೆ. ಹಾಗೆಯೇ ಗ್ರಾಮದಲ್ಲಿ ಯಾವುದೇ ಕೋಮು ಗಲಭೆ ಸೃಷ್ಟಿಯಾಗಬಾರದು ಎನ್ನುವ ನೆಲೆಯಲ್ಲಿ ಎರಡೂ ಸಮುದಾಯದ ಮುಖಂಡರ ಸಮ್ಮುಖದಲ್ಲಿ ಸಭೆಯನ್ನೂ ನಡೆಸಲಾಗಿದೆ.





















































 
 
error: Content is protected !!
Scroll to Top