ಪುತ್ತೂರು: ಹತ್ತೂರೊಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ಮಾ. 8 ರಂದು ಬಿಡುಗಡೆ ಮಾಡಲಿದ್ದಾರೆ.
ಮಹಾಲಿಂಗೇಶ್ವರ ದೇಗುಲದಲ್ಲಿ ಮಾ. 8 ರಂದು 11 ಗಂಟೆಗೆ ದೇಗುಲದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶಾಸಕರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಿದ್ದಾರೆ.
ಎ. 1 ರಂದು ಜಾತ್ರಾ ಪ್ರಯುಕ್ತ ಗೊನೆ ಮುಹೂರ್ತ ನಡೆಯಲಿದ್ದು, ಎ. 19 ರ ವರೆಗೆ ಪುತ್ತೂರು ಜಾತ್ರೆ ಬಹಳಷ್ಟು ವೈಭವದಿಂದ ನಡೆಯಲಿದೆ. ಪ್ರಧಾನ ವಿಧಿ ವಿಧಾನಗಳು ಎ. 10 ರಿಂದ ತೊಡಗಲಿದ್ದು, ಎ. 17 ರಂದು ಇತಿಹಾಸ ಪ್ರಸಿದ್ಧ ಮಹಾಲಿಂಗೇಶ್ವರನ ಬ್ರಹ್ಮರಥೋತ್ಸವ ನಡೆಯಲಿದೆ. ಎ. 18 ರಂದು ದೇವರ ಅವಭೃತ ಸ್ನಾನದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನವಾಗಲಿದೆ.
























