ಆರು ವರ್ಷಗಳಿಂದ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದ ಕಳ್ಳತನ ಪ್ರಕರಣದ ಆರೋಪಿಯ ಬಂಧನ

ಧರ್ಮಸ್ಥಳ: ಕಳ್ಳತನ ಪ್ರಕರಣವೊಂದರ ಆರೋಪಿ ಕಳೆದ ಆರು ವರ್ಷಗಳಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದು, ಆತನನ್ನು ತುಮಕೂರಿನ ತಿಪಟೂರಿನಲ್ಲಿ ಧರ್ಮಸ್ಥಳ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

ಬಂಧಿತನನ್ನು ಬೆಂಗಳೂರಿನ ಕುಂಬಳಗೋಡು ನಿವಾಸಿ ವೆಂಕಟೇಶ್ ಯಾನೆ ಡಾಬರ್ ವೆಂಕಟೇಶ್ ಎಂದು ಗುರುತಿಸಲಾಗಿದೆ.

2017 ರ ಸಮಯದಲ್ಲಿ ಡಾಬರ್ ವೆಂಕಟೇಶ್ ಮೇಲೆ ಧರ್ಮಸ್ಥಳ ಠಾಣೆಯಲ್ಲಿ ಕಳ್ಳತನಕ್ಕೆ ‌ಸಂಬಂಧಿಸಿದ ಪ್ರಕರಣವೊಂದು ದಾಖಲಾಗಿತ್ತು. ಸತತ ಆರು ವರ್ಷಗಳಿಂದ ಆತ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದ. ಸದ್ಯ ಆರೋಪಿ ಧರ್ಮಸ್ಥಳ ಪೊಲೀಸರ ಬಲೆಗೆ ಬಿದ್ದಿದ್ದಾನೆ.





















































 
 
error: Content is protected !!
Scroll to Top