ಡ್ರಗ್ಸ್‌ ಜಾಲ ಭೇದಿಸಿದ ಪೊಲೀಸರು : ಆರು ಆರೋಪಿಗಳ ಬಂದನ

ದುಬೈಯಿಂದ ಮಾದಕವಸ್ತು ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಗಳು

ಮಂಗಳೂರು: ಮಂಗಳೂರು ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿರುವ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರು ಆರೋಪಿಗಳನ್ನು ಬಂಧಿಸಿದ್ದಾರೆ.

ದಕ್ಷಿಣ ಠಾಣೆ ವ್ಯಾಪ್ತಿಯಲ್ಲಿ ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳಾದ ಉಡುಪಿ ಜಿಲ್ಲೆ ಕೋಟೇಶ್ವರ ನಿವಾಸಿ ಪ್ರಸ್ತುತ ಮಂಗಳೂರು ಪಾಂಡೇಶ್ವರದಲ್ಲಿ ವಾಸವಾಗಿರುವ ಮೊಹಮ್ಮದ್ ಸಯ್ಯದ್ ಆಫ್ರೀದಿ (26), ಅಹಮ್ಮದ್ ಅಲಿ ಅರ್ಷಾನ್ (22), ಮಂಗಳೂರು ಬಲ್ಮಠ ನಿವಾಸಿ ಮಕ್ಸೂದ್ ಸಾಗ್ (23) ಮತ್ತು ಕೇರಳದ ಕೊಟ್ಟಾಯಂ ನಿವಾಸಿ ಫೆಲಿಕ್ಸ್ ಪಿ. ಜೋಸೆಫ್ (20) ಎಂಬವರನ್ನು ಬಂಧಿಸಿ 53.87 ಗ್ರಾಂ ಎಂ.ಡಿ.ಎಂ.ಎ, 103.20 ಗ್ರಾಂ ಹೈಡ್ರೋವೀಡ್ ಗಾಂಜಾ ಹಾಗೂ ಎಂ.ಜಿ. ಹೆಕ್ಟರ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಮಾರ್ಚ್ 4ರಂದು ಬದ್ರಿಯಾ ರಸ್ತೆಯ ಲಾಡ್ಜ್‌ನಲ್ಲಿ ರೂಮ್ ಪಡೆದು ಆರೋಪಿಗಳು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿ ನಾಲ್ವರನ್ನು ಬಂಧಿಸಲಾಗಿದೆ.





















































 
 

ಉತ್ತರ ಠಾಣೆ ವ್ಯಾಪ್ತಿಯಲ್ಲಿ ಕಂಕನಾಡಿ ನಿವಾಸಿ ಎಡಲ್ ರೋಚ್ (33) ಮತ್ತು ಕದ್ರಿ ಮಲ್ಲಿಕಟ್ಟೆ ನಿವಾಸಿ ಆರೋನ್ ವಿಶಾಲ್ ಲಸ್ರಾದೋ (18) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 60 ಗ್ರಾಂ ಹೈಡ್ರೋವೀಡ್ ಗಾಂಜಾ, 1 ಕೆಜಿ 155 ಗ್ರಾಂ ಗಾಂಜಾ ಹಾಗೂ ಮಾರುತಿ ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡಿದ್ದಾರೆ. ಗ್ರೀನ್ ಪಾರ್ಕ್ ಮೈದಾನ, ಬಂದರಿನ ಸಮೀಪ ಕಾರಿನಲ್ಲಿ ಕುಳಿತು ಯುವಕರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿರುವಾಗ ಆರೋಪಿಗಳನ್ನು ಬಂಧಿಸಲಾಗಿದೆ.

ಮುಂಬೈ ನಿವಾಸಿ ಸಂದೀಪ್ ಶೆಟ್ಟಿ ಎಂಬಾತ ದುಬೈನಲ್ಲಿ ಹೋಟೆಲ್ ಮ್ಯಾನೇಜರ್ ಆಗಿದ್ದು, ಹೈಡ್ರೋವೀಡ್ ಗಾಂಜಾವನ್ನು ವಿಮಾನದ ಮೂಲಕ ಬೆಂಗಳೂರಿಗೆ ಸಾಗಾಟ ಮಾಡುತ್ತಿದ್ದುದಾಗಿ ತಿಳಿದುಬಂದಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಸಾಗಾಟ ಮಾಡಲು ಎಡಲ್ ರೋಚ್‌ನನ್ನು ನೇಮಕ ಮಾಡಿದ್ದನು.

ಎಡಲ್ ರೋಚ್ ಹಾಗೂ ಆರೋನ್ ಲಾಸ್ರಾದೋ ಎಂಬವರು ಮಕ್ಸೂದ್ ಸಾಗ್ ಮೂಲಕ ಮೊಹಮ್ಮದ್ ಸಯ್ಯದ್ ಆಫ್ರೀದಿ ಹಾಗೂ ಅಹಮ್ಮದ್ ಅಲಿ ಅರ್ಷಾನ್ ಅವರಿಗೆ ಮಾದಕ ವಸ್ತು ಪೂರೈಸುತ್ತಿದ್ದರೆಂದು ತನಿಖೆಯಲ್ಲಿ ಬಹಿರಂಗವಾಗಿದೆ. ಆರೋಪಿಗಳು ಬೆಂಗಳೂರಿನಿಂದ ಎಂ.ಜಿ. ಹೆಕ್ಟರ್ ವಾಹನದಲ್ಲಿ ಮಾದಕ ವಸ್ತುಗಳನ್ನು ಮಂಗಳೂರು ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದರು.

error: Content is protected !!
Scroll to Top