ಯಾದಗಿರಿ: ಬಾಲಕಿಯರ ಜೊತೆ ಅನುಚಿತವಾಗಿ ವರ್ತಿಸಿ ಫೋಕ್ಸೋ ಪ್ರಕರಣದ ಆರೋಪಿಯಾಗಿರುವ ಸ್ವಯಂಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾನೆ.
ಆತ ಬುಧವಾರ ರಾತ್ರಿ ಶಹಾಪುರ ಸಿಪಿಐ ಕಚೇರಿಗೆ ಬಂದು ವಿಚಾರಣೆಗೆ ಹಾಜರಾಗಿದ್ದು, ಬುಧವಾರ ಮಧ್ಯಾಹ್ನ 3 ಗಂಟೆಯ ಬಳಿಕವೂ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಆತನಿಗೆ ಸೂಚಿಸಿದ್ದಾರೆ.
ಗುರುವಾರದ ವಿಚಾರಣೆಯ ಬಳಿಕ ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ. ತನಿಖೆಗೆ ಸಹಕರಿಸದೇ ಹೋದಲ್ಲಿ ಆತನ ಬಂಧನದ ಸಾಧ್ಯತೆಗಳೂ ಇವೆ. ಆದ್ದರಿಂದಲೇ ಆತ ವಿಚಾರಣೆಗೆ ಹಾಜರಾಗಿದ್ದಾಗಿ ಹೇಳಲಾಗುತ್ತಿದೆ.
























