ಎಲ್ಲಾ ಸಮಸ್ಯೆಗೂ ಮಿಲಿಟರಿ ಸಂಘರ್ಷ ಪರಿಹಾರವಲ್ಲ: ಪ್ರಧಾನಿ ಮೋದಿ

ನವದೆಹಲಿ: ಯಾವ ಸಮಸ್ಯೆಗೂ ಮಿಲಿಟರಿ ಸಂಘರ್ಷವೇ ಪರಿಹಾರ ನೀಡಲಾರದು. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಗಳಿಗೆ ತಕ್ಷಣವೇ ಅಂತ್ಯ ಹಾಡಬೇಕು ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಫಿನ್‍ಲ್ಯಾಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಜೊತೆಗೆ ಸುಧೀರ್ಘ ಮಾತುಕತೆ ನಡೆಸಿ ಬಳಿಕ ಈ ಸಂದೇಶವನ್ನು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ನೀಡಿರುವುದಾಗಿದೆ.

ಜಂಟಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಮತ್ತು ಫಿನ್ಲೆಂಡ್‌ಗಳೆರಡೂ ಕಾನೂನು ಆಡಳಿತ, ಸಂವಾದ, ರಾಜತಾಂತ್ರಿಕತೆಯಲ್ಲಿ ಗಟ್ಟಿಯಾದ ನಂಬಿಕೆ ಇರಿಸಿವೆ. ಸಂಘರ್ಷಗಳಿಗೆ ಇತಿಶ್ರೀ ಹಾಡುವ ಪ್ರತಿಯೊಂದು ಪ್ರಯತ್ನಗಳಿಗೆ ನಮ್ಮ ಬೆಂಬಲ ಇದೆ ಎಂದಿದ್ದಾರೆ.





















































 
 
error: Content is protected !!
Scroll to Top