ಹತ್ತು ವರ್ಷಗಳಿಂದ ಪರಾರಿಯಾಗಿದ್ದ ಆರೋಪಿ ಕುಂದಾಪುರ ಪೊಲೀಸರ ಬಲೆಗೆ

ಕುಂದಾಪುರ: ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದ ಹೀಗೆ ಹತ್ತು ವರ್ಷಗಳಿಂದ ಚಳ್ಳೆಹಣ್ಞು ತಿನ್ನಿಸಿ ನಾಪತ್ತೆಯಾಗಿದ್ದ ಆರೋಪಿ ಪಶ್ಚಿಮ ಬಂಗಾಳದಲ್ಲಿ ಕುಂದಾಪುರ ಪೊಲೀಸರಿಗೆ ಅತಿಥಿಯಾಗಿದ್ದಾನೆ.

ಆರೋಪಿಯನ್ನು ಸಿದ್ದಾಪುರ ಗ್ರಾಮದ ಅಕ್ಕುಂಜೆಯ ಶಶಿಕಾಂತ ಶೆಟ್ಟಿ (44) ಎಂದು ಗುರುತಿಸಲಾಗಿದೆ.

ಕುಂದಾಪುರದ ಯುವತಿಯ ಜೊತೆಗೆ 2015 ರಲ್ಲಿ ಆರೋಪಿ ಶಶಿಕಾಂತ ಶೆಟ್ಟಿ ಮದುವೆಯಾಗಿದ್ದು, ವರದಕ್ಷಿಣೆಗೆ ಸಂಬಂಧಿಸಿದ ಹಾಗೆ ಈ ಮದುವೆ ಮುರಿದು ಬಿದ್ದಿತ್ತು. ಅದರಂತೆ ಆತನ ಪತ್ನಿ ನೀಡಿದ ದೂರಿನನ್ವಯ ಕುಂದಾಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಆದರೆ ಆತ ತಲೆಮರೆಸಿಕೊಂಡಿದ್ದ.





















































 
 

ಸದ್ಯ ಆತ ಪ. ಬಂಗಾಳದ ಬನಿನಾಥಪುರದಲ್ಲಿ ಕುಂದಾಪುರ ಪೊಲೀಸರು ಪತ್ತೆ ಮಾಡಿದ್ದಾರೆ. ಆದರೆ ಆತ ಅಲ್ಲಿಯೂ ಒಂದು ಮದುವೆಯಾಗಿದ್ದಾನೆ.

ಕುಂದಾಪುರ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

error: Content is protected !!
Scroll to Top