ಟೆಕ್ಸಾಸ್: ಕಳೆದ ಭಾನುವಾರ ಆಸ್ಟಿನ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತ ಮೂಲದ ವಿದ್ಯಾರ್ಥಿನಿ ಸಹ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ ನಾಲ್ಕಕ್ಕೇರಿದೆ.
ಟೆಕ್ಸಾಸ್ ವಿವಿಯ ವಿದ್ಯಾರ್ಥಿನಿ ಸವಿತಾ ಷಣ್ಮುಗ ಸುಂದರಂ ಮೃತ ವಿದ್ಯಾರ್ಥಿನಿ. ದಾಳಿ ಮಾಡಿದ ಬಂದೂಕುದಾರಿಯನ್ನು ಹತ್ಯೆ ಮಾಡಲಾಗಿದ್ದು, ಈ ದಾಳಿ ಸಂಭಾವ್ಯ ಭಯೋತ್ಪಾದಕ ದಾಳಿ ಎಂಬ ನೆಲೆಯಲ್ಲಿ ಎಫ್‌ಬಿಐ ತನಿಖೆ ಮಾಡುತ್ತಿದೆ. ಇರಾನ್ ಸಂಘರ್ಷ ಮತ್ತು ಈ ದಾಳಿಗೆ ಏನಾದರೂ ಸಂಪರ್ಕ ಇದೆಯೇ? ಎನ್ನುವ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಮೇ ತಿಂಗಳಲ್ಲಿ ನಿರ್ವಹಣಾ ಮಾಹಿತಿ ವ್ಯವಸ್ಥೆ ಮತ್ತು ಅರ್ಥಶಾಸ್ತ್ರದಲ್ಲಿ ಡ್ಯುಯಲ್ ಪದವಿಗಳೊಂದಿಗೆ ಪದವಿ ಮುಗಿಸಲಿದ್ದ ಸವಿತಾ, ಟೆಕ್ಸಾಸ್ ವಿಶ್ವವಿದ್ಯಾಲಯದ ಬಳಿಯ ಜನಪ್ರಿಯ ಸ್ಥಳವಾದ ಬುಫೋರ್ಡ್‌ನ ಬಾರ್ಮ್‌ನ ಹೊರಗೆ ಬಂದೂಕುಧಾರಿಯ ಗುಂಡಿಗೆ ಬಲಿಯಾಗಿದ್ದಾರೆ. ದಾಳಿಯಲ್ಲಿ ಕನಿಷ್ಠ 14 ಜನರು ಗಾಯಗೊಂಡಿದ್ದು, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿ ಕೊಂದು ಹೇಳಿದೆ.
ಬಂದೂಕುಧಾರಿಯ ಮನೆಯನ್ನು ಶೋಧಿಸಿದ ಅಧಿಕಾರಿಗಳಿಗೆ ಇರಾನ್‌ನ ಧ್ವಜ ಮತ್ತು ಇರಾನ್ ನಾಯಕರ ಚಿತ್ರಗಳು ಸಿಕ್ಕಿವೆ ಎಂದು ಅಧಿಕಾರಿಯೊಬ್ಬರು ಸಿಬಿಎಸ್ ನ್ಯೂಸ್‌ಗೆ ತಿಳಿಸಿದ್ದಾರೆ. ಗುಂಡಿನ ದಾಳಿಯ ಸಮಯದಲ್ಲಿ, ಡಯಾಗ್ನೆ ಮುಂಭಾಗದಲ್ಲಿ “ಅಲ್ಲಾಹನ ಆಸ್ತಿ” ಎಂದು ಬರೆದಿರುವ ಸೈಟ್‌ಶರ್ಟ್ ಮತ್ತು ಇರಾನಿನ ಧ್ವಜ ವಿನ್ಯಾಸವಿರುವ ಶರ್ಟ್ ಧರಿಸಿದ್ದ ಎಂದು ಕೆಲವು ಸುದ್ದಿಗಳು ಮಾಹಿತಿ ಭಿತ್ತರಿಸಿವೆ.
























