18 ಕೋ. ರೂ. ಮೌಲ್ಯದ ಡ್ರಗ್ಸ್‌ ವಶ : ಪ್ರೇಮಿಗಳ ಬಂಧನ

ಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದ ಕೇರಳದ ಲಿವ್‌ ಇನ್‌ ರಿಲೇಷನ್‌ ಪ್ರೇಮಿಗಳು

ಬೆಂಗಳೂರು: ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಪ್ರೇಮಿಗಳನ್ನು ಬಂಧಿಸಿ 18 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿ ಲಿವ್-ಇನ್ ರಿಲೇಶನ್‌ನಲ್ಲಿದ್ದ ಕೇರಳ ಮೂಲದ ಅಶ್ವಿನ್ ಹಾಗೂ ಮುಬೀನಾ ಬಂಧಿತ ಆರೋಪಿಗಳು.

ನಗರದ ಖಾಸಗಿ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದಾಗ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇದೇ ನಂಟು ಡ್ರಗ್ಸ್‌ ಮಾರಾಟ ಜಾಲಕ್ಕೂ ಕರೆತಂದಿತ್ತು. ಅಪಾರ್ಟ್‌ಮೆಂಟ್‌ ಫ್ಲ್ಯಾಟ್‌ನಲ್ಲಿ ಸಹಜೀವನ ನಡೆಸುತ್ತಿದ್ದ ಅಶ್ವಿನ್‌ ಮತ್ತು ಮುಬೀನಾ ಸುಲಭವಾಗಿ ಹಣ ಸಂಪಾದಿಸಲು ಡ್ರಗ್ಸ್‌ ಮಾಫಿಯಾ ಜತೆ ಕೈಜೋಡಿಸಿ ಥೈಲ್ಯಾಂಡ್‌ನಲ್ಲಿರುವ ಕೇರಳದ ಡ್ರಗ್‌ ಪೆಡ್ಲರ್‌ ಜತೆ ಸಂಪರ್ಕ ಬೆಳೆಸಿದ್ದರು. ಥೈಲ್ಯಾಂಡ್‌ನಿಂದ ಹೈಡ್ರೋ ಗಾಂಜಾ, ಎಲ್‌ಎಸ್‌ಡಿ ಸ್ಟ್ರಿಫ್ಸ್‌ ಸೇರಿದಂತೆ ನಾನಾ ಮಾದಕ ವಸ್ತುಗಳನ್ನು ತರಿಸಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ ಉದ್ಯೋಗಿಗಳಿಗೆ ಮಾರುತ್ತಿದ್ದರು. ವ್ಯಸನಿಗಳು ಹೇಳಿದ ಸ್ಥಳಕ್ಕೆ ಹೋಗಿ ಡ್ರಗ್ಸ್‌ ಕೊಟ್ಟು ತಮ್ಮ ಬ್ಯಾಂಕ್‌ ಖಾತೆಗೆ ಹಣ ಹಾಕಿಸಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.





















































 
 

ಬಾಗಲೂರಿನ ಏರ್‌ಪೋರ್ಟ್‌ ರಸ್ತೆಯ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ ಜೋಡಿಯೊಂದು ಡ್ರಗ್ಸ್‌ ಮಾರಾಟದಲ್ಲಿ ತೊಡಗಿರುವ ಖಚಿತ ಮಾಹಿತಿ ಆಧರಿಸಿ ಪೊಲೀಸ್‌ ತಂಡ ಸೋಮವಾರ ರಾತ್ರಿ ದಾಳಿ ನಡೆಸಿತ್ತು. ಅಶ್ವಿನ್‌ ಹಾಗೂ ಮುಬೀನಾರನ್ನು ಬಂಧಿಸಿ 18 ಕೋಟಿ ರೂ. ಮೌಲ್ಯದ 4 ಕೆ.ಜಿ. 500 ಗ್ರಾಂ ಹೈಡ್ರೋ ಗಾಂಜಾ, 500 ಗ್ರಾಂ. ಚರಸ್‌, 8,335 ಎಲ್‌ಎಸ್‌ಡಿ ಸ್ಟ್ರಿಫ್ಸ್‌ ಜಪ್ತಿ ಮಾಡಿದೆ.

ಆರೋಪಿಗಳು ಥೈಲ್ಯಾಂಡ್‌ನಿಂದ ತರಿಸಿದ್ದ ಎಲ್‌ಎಸ್‌ಡಿ ಸ್ಟ್ರಿಫ್ಸ್‌ನ ಶೀಟ್‌ ದೇವರ ಚಿತ್ರದಲ್ಲಿತ್ತು. ದಂಧೆಕೋರರು ಯಾರಿಗೂ ಅನುಮಾನ ಬಾರದಂತೆ ದೇವರ ಚಿತ್ರಪಟದಲ್ಲಿ ಎಲ್‌ಎಸ್‌ಡಿ ಸ್ಟ್ರಿಫ್ಸ್‌ ಅಡಗಿಸಿಟ್ಟಿದ್ದರು. ಒಂದು ತುಂಡು ಎಲ್‌ಎಸ್‌ಡಿಗೆ ಮಾರುಕಟ್ಟೆಯಲ್ಲಿ 3 ರಿಂದ 4 ಸಾವಿರ ರೂ. ಇದೆ ಎಂದು ಪೊಲೀಸರು ಹೇಳಿದ್ದಾರೆ.

error: Content is protected !!
Scroll to Top