ಇನ್‌ಸ್ಟಾಗ್ರಾಂನಲ್ಲಿ ಖಮೇನಿ ಹತ್ಯೆ ಕುರಿತು ಪೋಸ್ಟ್‌ ಹಾಕಿದ ಹಿಂದೂ ಯುವಕನ ಮೇಲೆ ಹಲ್ಲೆ

ಅಂಗಡಿಗೆ ನುಗ್ಗಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ತಂಡ

ಬೆಂಗಳೂರು: ಅಮೆರಿಕ ಮತ್ತು ಇಸ್ರೇಲ್​ ಕ್ಷಿಪಣಿ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾದ ಕುರಿತಾಗಿ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿದ ಕಾರಣಕ್ಕೆ ಮುಸ್ಲಿಂ ಯುವಕರು ಹಿಂದೂ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದಿದೆ.

ಚಂದ್ರಶೇಖರ ಎಂಬವರ ಮೇಲೆ ಐದಾರು ಮುಸ್ಲಿಂ ಯುವಕರು ಹಲ್ಲೆ ಮಾಡಿದ್ದಾರೆ. ಚಂದ್ರಶೇಖರ ಖರ್ಜೂರ ವ್ಯಾಪಾರಿಯಾಗಿದ್ದು, ವ್ಯಾಪಾರ ಮಾಡುತ್ತಿದ್ದ ವೇಳೆ ಏಕಾಏಕಿ‌ ಬಂದ ಮುಸ್ಲಿಂ ಯುವಕರು ಹಲ್ಲೆ ಮಾಡಿದ್ದಾರೆ. ನಮ್ಮ ಸಮಾಜದ ಬಗ್ಗೆ ಏಕೆ ಸ್ಟೋರಿ ಹಾಕಿದೆ, ನಮಗೆ ನೋವಾಗಿದೆ ಎಂದು ಚಂದ್ರಶೇಖರಗೆ ಬೈದು ಹಲ್ಲೆ ಮಾಡಿ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಚಂದ್ರಶೇಖರ ಮುಸ್ಲಿಂ ಯುವಕರಿಂದ ಜೀವ ಭಯವಿದೆ ಎಂದು ತಡರಾತ್ರಿ ಗಂಗಾವತಿ ನಗರ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದು, ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.





















































 
 

ಖಮನೈ ಹತ್ಯೆ ಸುದ್ದಿ ಹೊರ ಬೀಳುತ್ತಿದ್ದಂತೆ ರಾಜ್ಯದ ಹಲವು ಭಾಗಗಳಲ್ಲಿ ಮುಸ್ಲೀಮರು ಪ್ರತಿಭಟನೆ ಮಾಡಿದ್ದಾರೆ. ಚಿಕ್ಕಬಳ್ಳಾಪುರದ ಅಲಿಪುರ ಗ್ರಾಮದಲ್ಲೂ ಶೋಕ ಆಚರಿಸಲಾಗಿತ್ತು. ಅಂಗಡಿಮುಂಗಟ್ಟು ಬಂದ್ ಮಾಡಿದ್ದ ಮುಸ್ಲೀಮರು, ಕಪ್ಪು ಬಾವುಟ ಪ್ರದರ್ಶಿಸಿ ಸಾವಿರಾರು ಸಂಖ್ಯೆಯಲ್ಲಿ ಖಮೇನಿ ಹತ್ಯೆ ಖಂಡಿಸಿ ಮೆರವಣಿಗೆ ಮಾಡಿದ್ದರು.

error: Content is protected !!
Scroll to Top