ಉಡುಪಿ: ಪ್ರೇಮ ಪ್ರಕರಣದ ರಾಜಿ ಪಂಚಾಯಿತಿ ನಡೆಸುತ್ತಿದ್ದ ಮುಖಂಡನ ಮೇಲೆ ಚಾಕುವಿನಿಂದ ಹಲ್ಲೆ

ಉಡುಪಿ: ಪ್ರೇಮ ಪ್ರಕರಣದ ರಾಜಿ ಪಂಚಾಯಿತಿ ನಡೆಸುತ್ತಿದ್ದ ಸ್ಥಳೀಯ ಮೀನುಗಾರರ ಮುಖಂಡನಿಗೆ ಚಾಕುವಿನಿಂದ ಇರಿದ ಘಟನೆ ಉಡುಪಿ ಸಮೀಪ ಮಲ್ಪೆಯಲ್ಲಿ ನಡೆದಿದೆ. ಮಂಜು ಕೊಳ ಯಾನೆ ಮಂಜುನಾಥ ಸಾಲಿಯಾನ್ ಚಾಕು ಇರಿತಕ್ಕೊಳಗಾದ ಮೀನುಗಾರರ ಮುಖಂಡ.

ಮಲ್ಪೆಯ ಯುವಕನ ಜೊತೆ ಪಡುಬಿದ್ರಿ ಪಲಿಮಾರು ಪರಿಸರದ ಯುವತಿಯ ಪ್ರೇಮ ಪ್ರಕರಣದ ಕುರಿತು ಮಾತುಕತೆಗೆ ಬಂದಿದ್ದ ಯುವತಿಯ ಕಡೆಯವರು ಮೀನುಗಾರ ಮುಖಂಡನಿಗೆ ಚಾಕುವಿನಿಂದ ಇರಿದಿದ್ದಾರೆ. ಗಾಯಾಳು ಮಂಜು ಕೊಳ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಗಂಭೀರ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.

ಇರಿದ ಆರೋಪಿಗಳನ್ನು ಸ್ಥಳೀಯರು ಪತ್ತೆ ಮಾಡಿ ಪೊಲೀಸರ ವಶಕ್ಕೊಪ್ಪಿಸಿದ್ದಾರೆ. ಘಟನೆ ಸಂಬಂಧ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





















































 
 
error: Content is protected !!
Scroll to Top