ವೃತ್ತಿ ಬದುಕಿನ ಯಶಸ್ಸಿಗೆ ಸಂದರ್ಶನ ಕೌಶಲ್ಯ ಅಗತ್ಯ: ಸೀತಾರಾಮ ಕೇವಳ

ಬೆಳ್ಳಾರೆ ಜ್ಞಾನದೀಪದಲ್ಲಿ ಸಂದರ್ಶನ ಕೌಶಲ್ಯ ಕಾರ್ಯಾಗಾರ

ಭವಿಷ್ಯ ನಿರ್ಮಾಣಕ್ಕೆ ಸಂದರ್ಶನ ಕೌಶಲ್ಯ ತರಬೇತಿ ಸಹಕಾರಿಯಾಗಿದ್ದು, ಸಂದರ್ಶನ ಎದುರಿಸುವ ಗುಟ್ಟು ತಿಳಿದಾಗ ಮಾತ್ರ ಉತ್ತಮ ಉದ್ಯೋಗದ ಕನಸು ನನಸಾಗಿಸಿಕೊಳ್ಳಲು ಸಾಧ್ಯ ಎಂದು ಜೇಸಿಐ ರಾಷ್ಟ್ರೀಯ ತರಬೇತುದಾರ ಸೀತಾರಾಮ ಕೇವಳ ಹೇಳಿದರು. ಅವರು
ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ವತಿಯಿಂದ ಜ್ಞಾನದೀಪ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಒಂದು ದಿನದ ಸಂದರ್ಶನ ಕೌಶಲ್ಯ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತರಬೇತಿ ನೀಡಿದರು.

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ. ಕ ಜಿಲ್ಲಾಧ್ಯಕ್ಷ ಈಶ್ವರ ವಾರಣಾಶಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಸಂದರ್ಶನ ಭಯ ನಿವಾರಣೆಗೆ ಇಂತಹ ಮಾರ್ಗದರ್ಶನ ಕಾರ್ಯಾಗಾರಗಳು ಅವಶ್ಯ ಎಂದರು.





















































 
 

ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಅಧ್ಯಕ್ಷತೆ ವಹಿಸಿದ್ದದರು. ಉಪನ್ಯಾಸಕಿ ರಶ್ಮಿ ಶೇಣಿ ಸ್ವಾಗತಿಸಿದರು. ಶಿಕ್ಷಕಿ ಸಿಂಚನಾ ಕೆ ಪಿ ವಂದಿಸಿದರು.ಉಪನ್ಯಾಸಕ ಯೋಗೀಶ್ ತಳೂರು ಕಾರ್ಯಕ್ರಮ ನಿರ್ವಹಿಸಿದರು.

error: Content is protected !!
Scroll to Top