ಇರಾನ್‌ನ ಪರಮೋಚ್ಚ ನಾಯಕ ಅಯಾತೊಲ್ಲ ಖಮೇನಿ ಹತ್ಯೆ

ಕ್ಷಿಪಣಿ ದಾಳಿಗೆ ಬಲಿ ಎಂಉದ ಅಮೆರಿಕ ಘೋಷಣೆ; ದೃಢಪಡಿಸಿದ ಇರಾನ್‌

ಟೆಹ್ರಾನ್: ಇರಾನ್‌ನ ಸರ್ವೋಚ್ಛ ನಾಯಕ ಅಯಾತೊಲ್ಲ ಅಲಿ ಖಮೇನಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿದ ಕೆಲವೇ ಗಂಟೆಗಳಲ್ಲಿ ಇರಾನ್‌ ಮಾಧ್ಯಮ ಕೂಡ ಹತ್ಯೆಯನ್ನು ದೃಢಪಡಿಸಿದೆ. ಇಸ್ರೇಲ್-ಇರಾನ್-ಅಮೆರಿಕ ನಡುವಿನ ಯುದ್ಧದಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಸಾವಿನ ಕುರಿತಾದ ವದಂತಿಗಳು ಜಗತ್ತಿನಾದ್ಯಂತ ಸಂಚಲನ ಮೂಡಿಸಿವೆ. ಇಸ್ರೇಲ್‌ನ ಪ್ರಮುಖ ಮಾಧ್ಯಮ ಸಂಸ್ಥೆಗಳು ವರದಿ ಮಾಡಿರುವ ಪ್ರಕಾರ, ಇಸ್ರೇಲ್ ಮತ್ತು ಅಮೆರಿಕ ಇತ್ತೀಚೆಗೆ ಇರಾನ್‌ನ ಪ್ರಮುಖ ನೆಲೆಗಳ ಮೇಲೆ ನಡೆಸಿದ ವಾಯು ದಾಳಿಯಲ್ಲಿ ಖಮೇನಿ ಅವರು ಮೃತಪಟ್ಟಿದ್ದಾರೆ. ಕೆಲವು ವರದಿಗಳು ಖಮೇನಿ ಅವರ ಆರೋಗ್ಯ ಹದಗೆಟ್ಟಿದ್ದು, ಅವರನ್ನು ರಹಸ್ಯ ಸುರಕ್ಷಿತ ತಾಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ಹೇಳುತ್ತಿವೆ.

ಯುದ್ಧದ ಸಮಯದಲ್ಲಿ ಎರಡೂ ದೇಶಗಳ ನಡುವೆ ಕೇವಲ ಕ್ಷಿಪಣಿ ದಾಳಿಯಷ್ಟೇ ಅಲ್ಲದೆ, ‘ಸೈಕಲಾಜಿಕಲ್ ವಾರ್’ ಕೂಡ ನಡೆಯುತ್ತಿದೆ. ಶತ್ರು ದೇಶದ ನಾಯಕ ಸತ್ತಿದ್ದಾನೆ ಎಂದು ಬಿಂಬಿಸುವ ಮೂಲಕ ಆ ದೇಶದ ಸೈನ್ಯ ಮತ್ತು ಜನರ ಆತ್ಮವಿಶ್ವಾಸವನ್ನು ಕುಗ್ಗಿಸುವುದು ಇಂತಹ ವರದಿಗಳ ಹಿಂದಿನ ತಂತ್ರಗಾರಿಕೆಯಾಗಿರುತ್ತದೆ. ಅಮೆರಿಕ ಈ ತಂತ್ರವನ್ನು ಅನುಸರಿಸಿರಬಹುದು ಎಂದು ಹೇಳಲಾಗುತ್ತಿದೆ.





















































 
 

ನ್ಯೂಯಾರ್ಕ್ ಟೈಮ್ಸ್ ಬಿಡುಗಡೆ ಮಾಡಿದ ಉಪಗ್ರಹ ಛಾಯಾಚಿತ್ರವು ಟೆಹ್ರಾನ್‌ನಲ್ಲಿರುವ ಖಮೇನಿ ಅವರ ಕಾಂಪೌಂಡ್‌ಗೆ ಹಾನಿಯಾಗಿರುವುದನ್ನು ತೋರಿಸಿದೆ, ಅದು ಅವರ ಅಧಿಕೃತ ನಿವಾಸವಾಗಿಯೂ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ.

error: Content is protected !!
Scroll to Top