ಉಪ್ಪಿನಂಗಡಿ: ಅಕ್ರಮವಾಗಿ ಗೋ ಹತ್ಯೆ ಮಾಡಿ ಮಾಂಸ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಉಪ್ಪಿನಂಗಡಿಯ ಬಾರ್ಯದ ಹೊಸವಕ್ಲು ಎಂಬಲ್ಲಿನ ಮನೆಯೊಂದಕ್ಕೆ ದಾಳಿ ನಡೆಸಿ ಗೋಮಾಂಸ ವಶಕ್ಕೆ ಪಡೆದ ಪೊಲೀಸರು ಆರೋಪಿಯ ಮನೆಯನ್ನು ಜಪ್ತಿ ಮಾಡಿದ್ದಾರೆ.
ಅಕ್ರಮ ಗೋ ಹತ್ಯೆ, ಮಾರಾಟದ ಖಚಿತ ಮಾಹಿತಿ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಇಬ್ಬರು ಆರೋಪಿಗಳು ಮನೆಯಿಂದ ಪರಾರಿಯಾಗಿದ್ದಾಗಿ ತಿಳಿದು ಬಂದಿದೆ. ಪರಿಶೀಲನೆ ವೇಳೆ ಗೋಮಾಂಸವನ್ನು ಪ್ಯಾಕೆಟ್‌ಗಳಾಗಿ ಮಾಡಿಟ್ಟಿರುವುದು ಪತ್ತೆಯಾಗಿದೆ. ಹಾಗೆಯೇ ಸಮೀಪದಲ್ಲೇ ಇದ್ದ ಆಟೋ ರಿಕ್ಷಾದಲ್ಲಿಯೂ ಗೋ ಮಾಂಸದ ಪ್ಯಾಕೆಟ್ ಪೊಲೀಸರಿಗೆ ದೊರೆತಿದೆ.
ಪೊಲೀಸರು ಗೋ ಮಾಂಸದ ಜೊತೆಗೆ ಆಟೋ ರಿಕ್ಷಾ, ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದಿದ್ದಾರೆ. ಮಾಂಸ ದೊರೆತ ಅಬ್ದುಲ್ ರಹಮಾನ್ ಎಂಬ ಆರೋಪಿಯ ಮನೆಯನ್ನು ಜಪ್ತಿ ಮಾಡಲಾಗಿದೆ.
























