ಬೆಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: 16 ಡ್ರಗ್ಸ್ ಪೆಡ್ಲರ್‌ಗಳು ಅಂದರ್

ಬೆಂಗಳೂರು: ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ 16 ಮಂದಿ ಮಾದಕ ವಸ್ತು ಮಾರಾಟಗಾರರನ್ನು ಬಂಧಿಸಲಾಗಿದೆ.

ಬೆಂಗಳೂರಿನ ವಿವಿಧ ನಗರಗಳ ಪೊಲೀಸರು ಮತ್ತು ಸಿಸಿಬಿ ‌ನಡೆಸಿದ ಕಾರ್ಯಾಚರಣೆಯಲ್ಲಿ ಡ್ರಗ್ಸ್ ಪೆಡ್ಲರ್‌ಗಳು ಬಲೆಗೆ ಬಿದ್ದಿರುವುದಾಗಿದೆ. ಆರೋಪಿಗಳಲ್ಲಿ ವಿದೇಶಿಗರು, ಹೊರ ರಾಜ್ಯದವರು ಸೇರಿದಂತೆ ಎಂಟು ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ 5.24 ಕೋಟಿ ರೂ. ಗಳ ಮೌಲ್ಯದ, ಮೂರು ಸಾವಿರ ಎಂಡಿಎಂ, ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ಹಾಗೆಯೇ ಖಚಿತ ಮಾಹಿತಿ ಪಡೆದು ಮೇರೆಗೆ ದಾಳಿ ನಡೆಸಿದ್ದಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ, ಬಂಧಿತಳಿಂದ 2 ಕೋಟಿ ರೂ ಮೌಲ್ಯದ 300 ಎಕ್ಸ್‌ ಟೆಸಿ ಮಾತ್ರೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪರಾರಿಯಾಗಿರುವ ವಿದೇಶಿ ಡ್ರಗ್ ಪೆಡ್ಲರ್‌ಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.





















































 
 

ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ಕೋಟಿಗಟ್ಟಲೆ ರೂಪಾಯಿ ಬೆಲೆ ಬಾಳುವ ಮಾದಕ ವಸ್ತುಗಳನ್ನು ಪೊಲೀಸರು ಸೀಝ್ ಮಾಡಿದ್ದರು.

error: Content is protected !!
Scroll to Top